ಬೆಳಗಾವಿ ನಗರದ ತಿಳಕವಾಡಿಯ ವರೇರಕರ ನಾಟ್ಯ ಸಂಘದ ಸಭಾಗೃಹದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಶಿಬಿರವನ್ನು ಡಾ.ಮಲ್ಲಿಕಾರ್ಜುನ ಜಾಲಿ ಉದ್ಘಾಟಿಸಿದರು. ಗುಂಡೇನಟ್ಟಿ ಮಧುಕರ, ನಾಗೇಶ ಚಿಮರೋಲ ಇತರರಿದ್ದರು. 
ಬೆಳಗಾವಿ

ಸಮಾಜಕ್ಕೆ ಕಲಾವಿದರ ಕೊಡುಗೆ ಅಪಾರ

ಬೆಳಗಾವಿ: ಚಿತ್ರ ಕಲಾವಿದನಿಗೆ ಭಾಷೆ ಎಂಬುದಿಲ್ಲ. ತನ್ನ ಹೃದಯದ ಭಾವನೆಗಳನ್ನು ಚಿತ್ರಕಲೆ ಮೂಲಕ ವ್ಯಕ್ತಪಡಿಸುತ್ತಾನೆ. ಸಮಾಜಕ್ಕೆ ಕಲಾವಿದನ ಕೊಡುಗೆ ಅಪಾರ ಎಂದು ಕೆಎಲ್ಇ ಆಸ್ಪತ್ರೆ ವೈದ್ಯಕೀಯ ಸಲಹೆಗಾರ ಡಾ.ಮಲ್ಲಿಕಾರ್ಜುನ ಜಾಲಿ ಹೇಳಿದರು.
ನಗರದ ತಿಳಕವಾಡಿಯ ವರೇರಕರ ನಾಟ್ಯ ಸಂಘದ ಸಭಾಗೃಹದಲ್ಲಿ ಈಚೆಗೆ ವರ್ಣಕಲಾ ಸಾಂಸ್ಕೃತಿಕ ಸಂಘ, ಶ್ರೀಮಾತಾ ಗ್ಲಾಸ್ ಆರ್ಟ್ ಗ್ಯಾಲರಿ ಸಂಘಟನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಶ್ವಕಲಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲೇಖಕ ಗುಂಡೇನಟ್ಟಿ ಮಧುಕರ ಮಾತನಾಡಿ, ಸಾಹಿತ್ಯ, ಚಿತ್ರಕಲೆ, ಸಂಗೀತಕ್ಕೆ ಅಳಿವಿಲ್ಲ ಎಂದರು. ವರ್ಣಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ ಚಿಮರೋಲ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ಪಾಟೀಲ, ದೀಪಾ ವಾಲಿ, ರವಿ ಓಂಕಾರ, ದೇಮಣ್ಣ, ಭರಮಣ್ಣ ವೇತಾಳ, ವಾಣಿ ಹಿರೇಮಠ, ವಾಣಿ ನಡಗಕರ, ದಿಲೀಪಕುಮಾರ ಕಾಳೆ, ದರ್ಶನ ಚೌಧರಿ, ದಾದಾ ಚಿತ್ರದುರ್ಗ ಇತರರಿದ್ದರು.