ಕೊಟ್ಟಲಗಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ೨೨ನೇ ಸರ್ವಧರ್ಮ ಸಮಾವೇಶದ ಕರಪತ್ರವನ್ನು ಶಾಸಕ ಲಕ್ಷ್ಮಣ ಸವದಿ ಬಿಡುಗಡೆಗೊಳಿಸಿದರು. ರಘು ದೊಡ್ಡನಿಂಗಪ್ಪಗೋಳ, ಬಾವುರಾಜ ಝಳಕಿ, ಶಿವಪ್ರಭು ಅಥಣಿ ಇತರರಿದ್ದರು.
ಕೊಟ್ಟಲಗಿ: ಗ್ರಾಮದಲ್ಲಿ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಆಧ್ಯಾತ್ಮಿಕ ಸಪ್ತಾಹ, ಕೋಮು ಸೌಹಾರ್ದ ಹಾಗೂ ವಿಶ್ವಶಾಂತಿಗಾಗಿ ೨೨ನೇ ಸರ್ವಧರ್ಮ ಸಮಾವೇಶ ಡಿ.೨೦, ೨೧ರಂದು ಹಮ್ಮಿಕೊಳ್ಳಲಾಗಿದೆ.
ಡಿ.೨೦ರಂದು ಮಧ್ಯಾಹ್ನ ೧೨ ಗಂಟೆಗೆ ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಧ್ಯಾಹ್ನ ೩.೩೦ಕ್ಕೆ ಹನುಮಾನ ದೇವಸ್ಥಾನದಿಂದ ಮಾಧವಾನಂದ ವೃತ್ತದವರೆಗೆ ಶ್ರೀ ಮಾಧವಾನಂದ ಪ್ರಭುಜಿ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಜಾನಪದ ಕಲಾತಂಡಗಳು ಹಾಗೂ ಶಹನಾಯಿ ವಾದನ ಸಂಘಗಳು ಪಾಲ್ಗೊಳ್ಳಲಿವೆ. ರಾತ್ರಿ ೧೦ ಗಂಟೆಗೆ ಜಾಗರಣೆ ಹಾಗೂ ಡೊಳ್ಳಿನಪದಗಳ ಕಾರ್ಯಕ್ರಮ ನಡೆಯಲಿದೆ. ಡಿ.೨೧ರಂದು ಬೆಳಗ್ಗೆ ೭ರಿಂದ ಭಜನೆ, ೯.೩೦ಕ್ಕೆ ರೇವಣಸಿದ್ಧೇಶ್ವರ ಮಹಾರಾಜರಿಂದ ಪ್ರವಚನ ಹಾಗೂ ಆಶೀರ್ವಚನ ನಡೆಯಲಿದೆ. ನಂದಗಾಂವದ ಮಹಾದೇವ ಮಹಾರಾಜರು, ಯಕ್ಕಂಚಿ ಗುರುಪಾದ ಶ್ರೀಗಳು, ರಾಮತೀರ್ಥದ ತಾರಾಚಂದ ಮಹಾರಾಜರು, ಶಾಸಕ ಲಕ್ಷ್ಮಣ ಸವದಿ, ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶಹಜಹಾನ್ ಡೊಂಗರಗಾಂವ ಇತರರು ಪಾಲ್ಗೊಳ್ಳುವರು.
ಕೊಟ್ಟಲಗಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ೨೨ನೇ ಸರ್ವಧರ್ಮ ಸಮಾವೇಶದ ಕರಪತ್ರವನ್ನು ಶಾಸಕ ಲಕ್ಷ್ಮಣ ಸವದಿ ಬಿಡುಗಡೆಗೊಳಿಸಿದರು. ರಘು ದೊಡ್ಡನಿಂಗಪ್ಪಗೋಳ, ಬಾವುರಾಜ ಝಳಕಿ, ಶಿವಪ್ರಭು ಅಥಣಿ ಇತರರಿದ್ದರು.