ಅರಬಾವಿ ಪಟ್ಟಣದಲ್ಲಿ ಬಸವೇಶ್ವರ ಸಮುದಾಯ ಭವನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಸುಭಾಸ ಪಾಟೀಲ, ಶಂಕರ ಬಿಲಕುಂದಿ ಇತರರಿದ್ದರು.
ಗೋಕಾಕ: ಮದುವೆ, ಉಪನಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಮುದಾಯ ಭವನ ಅನುಕೂಲವಾಗಲಿದೆ. ನಾಗರಿಕರು ಸ್ವಚ್ಛತೆ ಕಾರ್ಯ ಕೈಗೊಂಡು ನಗರವನ್ನು ಸುಂದರವಾಗಿ ಪರಿವರ್ತಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಅರಬಾವಿ ಪಟ್ಟಣದ ಬಡಿಗೇರ ಓಣಿಯಲ್ಲಿ ನಿರ್ಮಿಸಿರುವ ಬಸವೇಶ್ವರ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಅರಬಾವಿ ಕ್ಷೇತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಅಲ್ಲದೆ, ಸಾರ್ವಜನಿಕ ಸಮಸ್ಯೆಗಳಿಗೂ ಸ್ಪಂದಿಸಲಾಗುತ್ತಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು.
ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತಪ್ಪ ಜಲ್ಲಿ, ನಿಂಗಪ್ಪ ಇಳಗೇರಿ, ಬಸವರಾಜ ಮಾಳೇದವರ, ಭೀಮಪ್ಪ ಹಳ್ಳೂರ, ಅಶೋಕ ಅಂಗಡಿ, ರಮೇಶ ಮಾದರ, ಅಂದಾನೆಪ್ಪ ಕಡಗದ, ಶಂಕರ ಕಂಬಾರ, ಡಾ.ಎಸ್.ಎಸ್.ಕಲ್ಲೊಳಿ, ಸಂಜು ಮಾದರ, ವಿಶ್ವನಾಥ ಹೊಸಮನಿ, ಸತ್ಯಪ್ಪ ಬಡಾಯಿ, ಸುನೀಲ ಜಮಖಂಡಿ, ಮಹಾದೇವ ಗುಡಿತೋಟ, ಚಂದ್ರಪ್ಪ ಘೀವಾರಿ, ಕಾಡಯ್ಯ ದಡ್ಡಿ, ರಾಯಪ್ಪ ಕಡ್ಡಿ, ಸಿದ್ದಪ್ಪ ಬಡಿಗೇರ, ರಿಯಾಜ ಯಾದವಾಡ, ಸಾತಪ್ಪ ಜೈನ, ಸದಾಶಿವ ಬಬಲೇಶ್ವರ, ಪರಶುರಾಮ ಸನ್ನಾಪಣಿ ಇತರರಿದ್ದರು.