ಮಬನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿಮಾನಿಗಳು ವಿರೂಪಾಕ್ಷ ಮಾಮನಿ ಅವರನ್ನು ಸನ್ಮಾನಿಸಿದರು. ಮಹಾದೇವ ಮುರಗೋಡ, ಈರಣ್ಣ ಚಂದರಗಿ, ಮಾರುತಿ ಅಪ್ಪನ್ನವರ, ಪುಂಡಲೀಕ ಉಪ್ಪಾರ ಇತರರಿದ್ದರು. 
ಬೆಳಗಾವಿ

ಜನರ ಆಶೀರ್ವಾದವೇ ಶ್ರೀರಕ್ಷೆ

ತಲ್ಲೂರ: ಜನರ ಪ್ರೀತಿ, ವಿಶ್ವಾಸದಿಂದ ನಮ್ಮ ಮನೆತನ ಈ ಮಟ್ಟಕ್ಕೆ ಬೆಳೆದಿದ್ದು, ಅವರ ಆಶೀರ್ವಾದವೇ ಶ್ರೀರಕ್ಷೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಹೇಳಿದರು.
ಮಬನೂರ ಗ್ರಾಮದಲ್ಲಿ ವಿರೂಪಾಕ್ಷ ಮಾಮನಿ ಅಭಿಮಾನಿಗಳ ಬಳಗ, ಪಕ್ಷದ ಕಾರ್ಯಕರ್ತರು ಬುಧವಾರ ಹಮ್ಮಿಕೊಂಡಿದ್ದ ೬೧ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಕೇಕ್ ಕತ್ತರಿಸಿ ಮಾತನಾಡಿದರು.
ಸವದತ್ತಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾದೇವ ಮುರಗೋಡ ಮಾತನಾಡಿ, ಮಾಮನಿ ಅವರು ಸರಳ ಸಜ್ಜನ ರಾಜಕಾರಣಿಯಾಗಿದ್ದು ಜನ ಸೇವೆ ಬಯಸುವ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು. ವಿರೂಪಾಕ್ಷ ಮಾಮನಿ ಅವರು ಬೆಳಗ್ಗೆ ಶ್ರೀಕ್ಷೇತ್ರ ಜಾಲಿಕಟ್ಟಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಸವೇಶ್ವರರ ದರ್ಶನ ಪಡೆದರು.
ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಈರಣ್ಣ ಚಂದರಗಿ, ಪೂರ್ವ ಸೈನಿಕ ಪ್ರಕೊಷ್ಟ ಜಿಲ್ಲಾ ಸಹ ಸಂಚಾಲಕ ಮಾರುತಿ ಅಪ್ಪನ್ನವರ, ಮದ್ಲೂರ ಗ್ರಾಪಂ ಮಾಜಿ ಅಧ್ಯಕ್ಷ ಪುಂಡಲೀಕ ಉಪ್ಪಾರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆನಂದ ಬಾಗೋಡಿ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೃಷ್ಣ ತೋರಗಲ್ಲ, ಯರಗಟ್ಟಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಚೇತನ ಜಕಾತಿ, ಯರಝರ್ವಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮಲ್ಲೇಶ ಕಲಕುಟ್ರಿ, ಮಾಧ್ಯಮ ಪ್ರಮುಖರ ವೀರಣ್ಣ ವೀರಶೆಟ್ಟಿ, ಯಲ್ಲಪ್ಪ ನರಿ, ಸಿದ್ರಾಯ ನೇಗಿನಾಳ, ಪುಂಡಲೀಕ ಚುಂಚನೂರ, ಈರಣ್ಣ ಹೊನಕುಪ್ಪಿ, ಶೇಖರ ಮೇಟಿ, ಮಂಜುನಾಥ ನರಿ, ಮಲ್ಲಿಕಾರ್ಜುನ ನರಿ, ಹನಮಂತ ಹೊನಕುಪ್ಪಿ ಇತರರಿದ್ದರು.