ಅಡಹಳಿಯಲ್ಲಿ ಚಿದಾನಂದ ಸವದಿ 40ನೇ ಜನ್ಮದಿನ ಆಚರಿಸಲಾಯಿತು. ಶಿವು ಗುಡ್ಡಾಪುರ, ಪ್ರಕಾಶ ಪೂಜಾರಿ, ಮಹಾದೇವ ಹಿಪ್ಪರಗಿ, ಸೂರ್ಯಕಾಂತ ಡಂಬಳಕರ ಇತರರಿದ್ದರು. 
ಬೆಳಗಾವಿ

ಜನಾಶೀರ್ವಾದವೇ ಶ್ರೀರಕ್ಷೆ

ಅಥಣಿ ಗ್ರಾಮೀಣ: ಹಣ, ಆಸ್ತಿ, ಅಧಿಕಾರಕ್ಕಿಂತ ಜನರ ಪ್ರೀತಿ, ಅಭಿಮಾನ ಶ್ರೇಷ್ಠವಾದುದು. ತಂದೆ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಉಸಿರಿರುವರೆಗೂ ಜನ ಸೇವೆ ಮಾಡುವೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ 40ನೇ ಜನ್ಮದಿನದ ಪ್ರಯುಕ್ತ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಜನರ ನೋವು ನಲಿವಿನಲ್ಲಿ ಭಾಗಿಯಾಗುತ್ತೇನೆ. ಕೇತ್ರದ ಜನರ ಆಶೀರ್ವಾದ ನನಗೆ ಶ್ರೀರಕ್ಷೆಯಾಗಿದೆ ಎಂದರು. ಕಾಂಗ್ರೆಸ್ ಯುವಮುಖಂಡ ಶಿವು ಗುಡ್ಡಾಪುರ ಮಾತನಾಡಿ, ಕರೋನಾ, ಪ್ರವಾಹ ಸಂದರ್ಭಗಳಲ್ಲಿ ಕ್ಷೇತ್ರದ ಜನರಿಗೆ ಆಹಾರ ಕಿಟ್ ಒದಗಿಸಲು ತಮ್ಮದೇ ಪಡೆ ಮೂಲಕ ಸಂತ್ರಸ್ತರ ಕಣ್ಣೀರು ಒರೆಸಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ ಎಂದರು.
ಪ್ರಕಾಶ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಹಿಪ್ಪರಗಿ, ಸೂರ್ಯಕಾಂತ ಡಂಬಳಕರ, ಸುನೀಲ ಕೆಂಚಣ್ಣವರ, ಚಿದಾನಂದ ಮಠಪತಿ, ಬಸವಂತ ಗುಡ್ಡಾಪುರ, ಚಿದಾನಂದ ಅಥಣಿ, ಶಿವಾಜಿ ಡಂಬಳಕರ, ಪರಸಪ್ಪ ಅಥಣಿ, ಮೋಹನ ಸೂರ್ಯವಂಶಿ, ಸತ್ಯಪ್ಪ ಸನದಿ, ಶ್ರೀಶೈಲ ಸನದಿ, ಕಲ್ಮೇಶ ಪೂಜಾರಿ, ಅಣ್ಣಪ್ಪ ಹಲ್ಯಾಳ, ಬಸೀರ್ ಅವಟಿ ಇತರರಿದ್ದರು.