ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಮಹಾಕುಂಭಾಭಿಷೇಕ ಹಾಗೂ ರಾಜಗೋಪುಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಿದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ ( ಮಾಂಜರಿ)
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಮಹಾಕುಂಭಾಭಿಷೇಕ ಹಾಗೂ ರಾಜಗೋಪುಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಾವಿರಾರೂ ವರ್ಷಗಳ ಧಾರ್ಮಿಕತೆ ಇತಿಹಾಸ ಹೊಂದಿರುವ ನಮ್ಮ ದೇಶ ವಸುದೈವ ಕುಟುಂಬದಂತೆ ನಮ್ಮ ದೇಶ ಆಗಿದೆ.ನದಿಗಳು ಪರ್ವತ ಸೇರಿದಂತೆ ಎಲ್ಲವನ್ನೂ ನೋಡುವುದೇ ನಮ್ಮ ಹಿಂದುತ್ವ. ಭಗವದ್ಗೀತೆಯ ಆಳವಾದ ಸಂದೇಶ ನಮಗೆ ಕಲಿಸಿದ ಪವಿತ್ರ ಗ್ರಂಥವಾಗಿದೆ ಎಂದರು.
ನಾಡಿನಲ್ಲಿ ವೀರಶೈವ ಲಿಂಗಾಯತ ಧರ್ಮದ ಮಠಗಳ ಕೊಡುಗೆ ಬಹಳವಿದ್ದು, ಅಭಿವೃದ್ಧಿ ಯಲ್ಲಿ ಪ್ರಮುಖ ಸ್ಥಾನವಹಿಸಿವೆ.ಈ ಪವಿತ್ರ ಕೃಷ್ಣಾ ನದಿಯ ದಡದಲ್ಲಿ ವೀರಭದ್ರೇಶ್ವರ ಹಾಗೂ ಕಾಡಸಿದ್ದೇಶ್ವರ ದೇವಸ್ಥಾನದ ಧಾರ್ಮಿಕ ಹಿನ್ನೆಲೆ ಈ ವೀರಭದ್ರೇಶ್ವರ ಹಾಗೂ ಈ ಪವಿತ್ರ ಸ್ಥಾನದ ಮಹತ್ವ ಶಿವ ಪುರಾಣಗಳಲ್ಲಿ ಉಲ್ಲೇಖವಾಗಿದೆ.ವೇದ ಆಗಮ ಪಾಠಶಾಲೆ ಪ್ರತೀ ವರ್ಷ ನೂರಾರು ಜನರಿಗೆ ವಿದ್ಯಾಧಾನ ಮಾಡುತ್ತಾರೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 1 ಕೋಟಿಗೂ ಅಧಿಕ ಜನ ವಾಸಿಸುತ್ತಿರುವುದು ವಿಶೇಷ. ಇಂತಹ ಧಾರ್ಮಿಕ ಕಾರ್ಯಯದಲ್ಲಿ ಭಾಗವಹಿಸಲು ಆಹ್ವಾನಿಸಿರುವುದು ಹಾಗೂವಿಶ್ವ ಚೇತನ್ ಪ್ರಶಸ್ತಿಗೆ ಶ್ರೀ ಮಠ ಪ್ರಶಂಸಿಸುತ್ತೇನೆ ಎಂದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡೀತಾರಾಧ್ಯ ಶಿವಾಚಾರ್ಯ ಸ್ವಾಮಿಜೀ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮ.
ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ,, ಶಾಸಕ ಗಣೇಶ ಹುಕ್ಕೇರಿ ಇತರರಿದ್ದರು.