ಬೈಲೂರು ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಾರಾಟ ಮಳಿಗೆ ನಿರ್ಮಾಣ ಕಾಮಗಾರಿಗೆ ನಾನಾಸಾಹೇಬ ಪಾಟೀಲ ಭೂಮಿಪೂಜೆ ನೆರವೇರಿಸಿದರು. ದುಂಡಪ್ಪ ಕ್ಯಾಸಗೇರಿ, ರುದ್ರಪ್ಪ ಕಟಗಿ, ಇಸ್ಮಾಯಿಲ್ ಅರಬರ ಇತರರಿದ್ದರು. 
ಬೆಳಗಾವಿ

ಅನ್ನದಾತರ ಸರ್ವಾಂಗೀಣ ಏಳಿಗೆಗೆ ಸಂಘ ಸಹಕಾರಿ

ಸಹಕಾರ ಸಂಘಗಳ ವಿವಿಧ ಯೋಜನೆಗಳ ಲಾಭ ಪಡೆದುಕೊಂಡು ರೈತರು ಆರ್ಥಿಕ ಸಬಲರಾಗಬೇಕು

ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಹೇಳಿದರು.

ಬೈಲೂರು ಗ್ರಾಮದಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಮಾರಾಟ ಮಳಿಗೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಹಕಾರ ಸಂಘಗಳು ರೈತರ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಜತೆಗೆ ಕೃಷಿ ಸಾಲ ಸೇರಿದಂತೆ ವಿವಿಧ ಸೌಲಭ್ಯ ಒದಗಿಸುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ ಎಂದರು. ಎಂಪಿಎಂಸಿ ಮಾಜಿ ಸದಸ್ಯ ದುಂಡಪ್ಪ ಕ್ಯಾಸಗೇರಿ ಮಾತನಾಡಿ, ರೈತರು ಸೌಲಭ್ಯ ಪಡೆದು ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ರುದ್ರಪ್ಪ ಕಟಗಿ, ಉಪಾಧ್ಯಕ್ಷ ಇಸ್ಮಾಯಿಲ್ ಅರಬರ, ನಿರ್ದೇಶಕರಾದ ಅಣ್ಣಪ್ಪ ಕಾಪೋಲಿ, ನಿಜಗುಣಿ ಬಾಗೇವಾಡಿ, ನಾಗಪ್ಪ ಮರೆಪ್ಪಗೋಳ, ಬಸಯ್ಯ ಚಿಕ್ಕಮಠ, ಶಿವಾನಂದ ಹಿರೇಮಠ, ಕಲ್ಲಪ್ಪ ಕ್ಯಾಸಗೇರಿ, ಗೋಪಾಲ ಚನ್ನಬಸಪ್ಪನವರ, ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಿವಾನಂದ ಕೋಟಗಿ, ಅಭಿಯಂತ ರಮೇಶ ಬಡಿಗೇರ, ನಾಗೇಶ ಹಂಚಿನಮನಿ ಇತರರಿದ್ದರು. ಮಹಾಂತೇಶ ಇಟಗಿ ನಿರೂಪಿಸಿದರು. ದೇವೇಂದ್ರ ಪಾಟೀಲ ಸ್ವಾಗತಿಸಿದರು.