ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ುಲೆ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಯಕುಮಾರ ಹೆಬಳಿ ಉದ್ಘಾಟಿಸಿದರು. ಸುರೇಂದ್ರ ಕಾಂಬಳೆ, ಕೃಷ್ಣ ರಾಜನ್ನವರ, ರಮೇಶ ಗೋಣಿ, ಎಂ.ಎಸ್.ನಿಜಗುಲಿ, ಸುಮಂಗಲಾ ಕಳಸಪ್ಪನವರ, ರಾಜಶೇಖರ ಹಿರೇಮಠ ಇತರರರಿದ್ದರು. 
ಬೆಳಗಾವಿ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಶ್ರಮ ಶ್ಲಾಘನೀಯ

ರಾಘವೇಂದ್ರಗೌಡ ಭೀ ಪಾಟೀಲ್
ನಗರದ ವಿದ್ಯಾಚೇತನ ಶಾಲಾ ಆವರಣದ ಗುರುಭವನದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಸಂಬಂಧಿಸಿದಂತೆ ಇರುವ ನಿಯಮ ಸರಳೀಕರಣಗೊಳಿಸಿ, ಶಿಕ್ಷಕರ ಸೇವೆಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಸಂಘಟನೆಯಿಂದ ಒತ್ತಾಯಿಸಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಕರು ಮತ್ತು ಶಿಕ್ಷಕರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಯುವ ಮುಖಂಡ ಅನಿಕೇತ ಪಟ್ಟಣ ಮಾತನಾಡಿ, ಸಾವಿತ್ರಿಬಾಯಿ ುಲೆ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಅವಮಾನ ಎದುರಿಸಿ, ಶಿಕ್ಷಣ ಪಡೆದು, ಮಹಿಳೆಯರಿಗೆ ಶಿಕ್ಷಣ ನೀಡುವ ಕೆಲಸದಿಂದ ಹಿಂದೆ ಸರಿಯಲಿಲ್ಲ. ಶಿಕ್ಷಕ ಸಮುದಾಯ ಸರ್ವರನ್ನು ಶಾಲೆಗೆ ತರುವ ಪ್ರಯತ್ನ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಕೃಷ್ಣ ರಾಜನ್ನವರ, ಕಾರ್ಯದರ್ಶಿ ರಮೇಶ ಗೋಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಂ.ಎಸ್.ನಿಜಗುಲಿ, ಉಪನ್ಯಾಸಕಿ ಸುಮಂಗಲಾ ಕಳಸಪ್ಪನವರ ಮಾತನಾಡಿದರು. ತಾಲೂಕಿನ ವಿವಿಧ ಶಾಲೆಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ 28 ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಐ.ಚಾಯಪ್ಪಗೋಳ, ಪಾಂಡುರಂಗ ಜಟಗನ್ನವರ, ಎನ್.ಎ.ಪಾಟೀಲ, ರಮೇಶ ಅಣ್ಣಿಗೇರಿ, ಕೆ.ಎನ್.ಯಡ್ರಾವಿ, ಎಸ್.ಐ.ಪಾಟೀಲ ಇತರರಿದ್ದರು.