ಆಲದಕಟ್ಟಿ ಕೆಎಂ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಚ್.ಕೆ.ಚೌರಡ್ಡಿ, ಸೋಮಪ್ಪ ತಲ್ಲೂರ, ಎಚ್.ಬಿ.ಜಮಾದಾರ, ರಾಮಪ್ಪ ಮಾಳಗಿ, ಕಿರಣ ಭೋವಿ ಇತರರಿದ್ದರು.
ತಲ್ಲೂರ: ಮಕ್ಕಳನ್ನು ರಕ್ಷಿಸುವ ಜತೆಗೆ ಅವರಿಗೆ ಅಗತ್ಯ ಸೌಲಭ್ಯ ಒದಗಿಸುವ ಮಹತ್ತರ ಜವಾಬ್ದಾರಿ ಪಾಲಕರು
ಹಾಗೂ ಶಿಕ್ಷಕರ ಮೇಲಿದೆ ಎಂದು ಪಿಡಿಒ ಎಚ್.ಕೆ.ಚೌರಡ್ಡಿ ಹೇಳಿದರು.
ಆಲದಕಟ್ಟಿ ಕೆಎಂ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚಗೆ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಬಾಲ್ಯ ವಿವಾಹ, ಬಾಲ ಕಾರ್ಮಿಕರ ಕಾನೂನು ತಿಳಿಯಬೇಕು. ಮಕ್ಕಳನ್ನು ದುಡಿಮೆಗೆ ಕಳುಹಿಸದೇ ಶಿಕ್ಷಣ ಕೊಡಿಸಬೇಕು. ಮನೆಯಲ್ಲಿನ ಆರ್ಥಿಕ ದುಸ್ಥಿತಿ, ಒತ್ತಡಕ್ಕೆ ಸಿಲುಕಿ ಹೆಣ್ಣು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುವುದು ಅಪರಾಧವಾಗಿದೆ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ತಲ್ಲೂರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆ ಮೀರಿಸುವಂಥ ಗುಣಮಟ್ಟದ ಶಿಕ್ಷಣ
ನೀಡಲಾಗುತ್ತಿದೆ. ಜತೆಗೆ ಎಲ್ಲ ಮೂಲ ಸೌಕರ್ಯ ಒದಗಿಸಲಾಗುತ್ತಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಮುಖ್ಯಶಿಕ್ಷಕ ಎಚ್.ಬಿ.ಜಮಾದಾರ, ರಾಮಪ್ಪ ಮಾಳಗಿ, ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಾ ಹಿರೇಮಠ, ಕಿರಣ ಭೋವಿ, ಉಮೇಶ ಬಿರಾದಾರಪಾಟೀಲ, ಬಿ.ಎಚ್.ದಿಲಾವರ, ಎಂ.ವಿ.ಬಡಿಗೇರ, ಮಲಿಕ್ ಸಾಬರ್, ಪಿ.ಡಿ.ಕೋಳಿ, ಲಕ್ಷ್ಮೀ ಬಿರಾಜನವರ, ದೀಪಾ ಬಡಿಗೇರ, ಶ್ರುತಿ ಹಳೇಮನಿ, ಶಾಂತವ್ವ ಜಡಿಯರ, ಶಿವಲೀಲಾ ಆಲದಕಟ್ಟಿ, ಶಿವಾನಂದ ಚವಡಪ್ಪನವರ ಹಾಗೂ ಅಂಗನವಾಡಿ, ಆಶಾ, ಕಾರ್ಯಕರ್ತೆಯರು ಇದ್ದರು.