ಬಾವನ ಸೌಂದತ್ತಿ ಬಳಿ ಶಿವಶಕ್ತಿ ಶುಗರ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನಕ್ಕೆ ಗಣ್ಯರು ಚಾಲನೆ ನೀಡಿದರು. ಮಲ್ಲಿಕಾರ್ಜುನ ಕೋರೆ, ಬಿ.ಎ.ಪಾಟೀಲ, ವಿಜಯ ಪಾಟೀಲ, ಪಿಂಟೂ ಹಿರೇಕುರುಬರ, ಯುವರಾಜ ಪಾಟೀಲ ಇತರರಿದ್ದರು. 
ಬೆಳಗಾವಿ

ಶಿವಶಕ್ತಿಯಲ್ಲಿ ೨೦ ಲಕ್ಷ ಟನ್ ಕಬ್ಬು ನುರಿಸುವ ಗುರಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಭರವಸೆ
  • ಬಾಯ್ಲರ್ ಪ್ರದೀಪನ
  • ಪೂಜಾ ವಿಧಿ ನೆರವೇರಿಸಿದ ಸಚಿನ ಪಾಟೀಲ ದಂಪತಿ
ಮಾಂಜರಿ: ಪ್ರಸಕ್ತ ಹಂಗಾಮಿನಲ್ಲಿ ಶಿವಶಕ್ತಿ ಸಕ್ಕರೆ ಕಾರ್ಖಾನೆ ೨೦ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು
ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಬಳಿ ಶಿವಶಕ್ತಿ ಶುಗರ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಚಿನ ಪಾಟೀಲ ದಂಪತಿ ಪೂಜಾ ವಿಧಿ ನೆರವೇರಿಸಿದರು. ಶಿವಶಕ್ತಿ ಶುಗರ್ಸ್ ಹಿರಿಯ ಅಧಿಕಾರಿ ಬಿ.ಎ.ಪಾಟೀಲ, ಅಧಿಕಾರಿ ವಿ.ಜೆ.ರವಿ, ಜನರಲ್ ಮ್ಯಾನೇಜರ್‌ಗಳಾದ ಮುರಳಿ, ಪಾಂಡುರಂಗ ಬಡಗಾನವರ, ಕಬ್ಬು ವಿಭಾಗದ ಮುಖ್ಯಸ್ಥ ವಿಜಯ ಪಾಟೀಲ, ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಪಿಂಟೂ ಹಿರೇಕುರುಬರ, ಎಸ್.ಪಿ.ನಿಪ್ಪಾಣಿ, ಬಿ.ಎಸ್.ಮುಧೋಳ, ಸಂಜಯ ಯಾದವ, ಕೇಶವ ಪ್ರಸಾದ, ಪ್ರದೀಪ ಮೂಡಲಗಿ, ಡಾ.ಸುಕುಮಾರ ಚೌಗುಲೆ, ಅಶೋಕ ಚೌಗುಲೆ, ಯುವರಾಜ ಪಾಟೀಲ, ಸತ್ಯಪ್ಪ ಭಿಸ್ಟೆ, ಕಲ್ಲಪ್ಪ ನಿಂಗನೂರೆ, ಕಾರ್ಖಾನೆ ನಿರ್ದೇಶಕರಾದ ಮಲ್ಲಪ್ಪ ಮೈಶಾಳೆ, ಅಮಿತ್ ಡಿ.ಕೋರೆ, ಸಾಗರ ಕೋರೆ ಇತರರಿದ್ದರು.