ಮೇಖಳಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ವಿ.ಆರ್. ಭಜಂತ್ರಿ, ಎಸ್.ಎಸ್.ಹೊಸಮನಿ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪುರೆ ಇತರರಿದ್ದರು.
ರಾಯಬಾಗ: ಕ್ಷೇತ್ರ ವ್ಯಾಪ್ತಿಯ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಆಸ್ಪತ್ರೆ, ವಿದ್ಯುತ್ ದೀಪ ವ್ಯವಸ್ಥೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಸಾಯಿನಗರದ 60 ಲಕ್ಷ ರೂ. ಅನುದಾನದಲ್ಲಿ 2.5 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟ ಜಲಸಂಗ್ರಹ ಟ್ಯಾಂಕ್ ನಿರ್ಮಾಣ ಹಾಗೂ ಮೇಖಳಿ-ನಾಗರಮುನ್ನೋಳ್ಳಿ ರಸ್ತೆಯಿಂದ ಕುದುರೆ ತೋಟದ ಜನವಸತಿ ಪ್ರದೇಶ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಾಯಿನಗರ ಜನರ ಬಹುದಿನಗಳ ಬೇಡಿಕೆಯಾಗಿದ್ದ ನಿರಂತರ 24 ಗಂಟೆ ಕುಡಿಯುವ ನೀರಿನ ಯೋಜನೆ ಕನಸು ಶೀಘ್ರ ನನಸಾಗಲಿದೆ ಎಂದರು.
ಜಿಪಂ ಎಇಇ ವಿ.ಆರ್.ಭಜಂತ್ರಿ, ಎಇ ಎಸ್.ಎಸ್.ಹೊಸಮನಿ, ಮುಖಂಡರಾದ ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪುರೆ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಪಿ.ಎ.ನಾಯಿಕ, ಬಸು ನಾಯಿಕ, ಸದಾಶಿವ ದಳವಾಯಿ, ಮಹೇಶ ಕರಮಡಿ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ಪರಶುರಾಮ ಪೂಜೇರಿ, ಅನಿಲ ಕೊರವಿ, ಸಂಜು ಒಡೆಯರ, ರವಿ ನಾಯಿಕ ಶಿವು ನಾಯಿಕ, ಅನಿಲ ಕಾಂಬಳೆ, ಸತ್ಯಪ್ಪ ಕುದುರೆ, ಪುಂಡಲೀಕ ಮುತಾರೆ, ಸಂಜು ನಾಯಿಕ, ಸುನೀಲ ಭಂಡಾರೆ, ಮಹಾಂತೇಶ ಜಾನ್ವೇಕರ ಇತರರಿದ್ದರು.