ಬೆಳಗಾವಿ ನಗರದ ಪಾಲಿಕೆ ಸುಭಾಷ ನಗರದಲ್ಲಿ ಕಾರ್ತಿಕ.ಎಂ. ಭೇಟಿ ನೀಡಿದರು. ಅನೂಪ ಕನೋಜ, ಆದಿಲ್ ಖಾನ ಪಠಾಣ, ವಿವೇಕ ಮಠದ ಇತರರಿದ್ದರು.
ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಅಳವಡಿಕೆಗಾಗಿ ಆಗೆದಿರುವ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಕಾರ್ತಿಕ.ಎಂ. ಎಚ್ಚರಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು ಹಾಗೂ ರಸ್ತೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನೀರು ಸರಬರಾಜು ಕಾಮಗಾರಿ ಹೆಸರಿನಲ್ಲಿ ಗುತ್ತಿಗೆದಾರರು ಬೇಕಾಬಿಟ್ಟಿ ರಸ್ತೆ ಅಗೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಕಳೆದ ನಾಲ್ಕೈದು ತಿಂಗಳ ಅವಧಿಯಲಿ ನಗರದ ತುಂಬೆಲ್ಲಾ ಕೈಗೊಂಡಿರುವ ವಿವಿಧ ಕಾಮಗಾರಿಗಳಿಂದ ಜನಸಾಮಾನ್ಯರು, ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ಕುಡಿಯುವ ನೀರಿನ ಪೈಪ್‌ಗಳಿಗೆ ಚರಂಡಿ ನೀರು ಸೇರುತ್ತಿರುವ ಮಾಹಿತಿ ಬಂದಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು. ಮಳೆಯ ಪರಿಣಾಮ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ತಿಳಿಸಿದರು.
ನಗರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಎರಡು ಭಾರಿ ಕಸ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಯಾರೊಬ್ಬರು ರಸ್ತೆಯ ಮೇಲೆ, ಚರಂಡಿಯಲ್ಲಿ ತ್ಯಾಜ್ಯ ಎಸೆಯಬೇಡಿ. ಮನೆ, ಅಂಗಡಿ ಬಾಗಿಲಿಗೆ ಬರುವ ಕಸದ ವಾಹನದಲ್ಲಿಯೇ ತ್ಯಾಜ್ಯ ಹಾಕಬೇಕು. ಕಸದ ರಾಶಿ ಕಂಡುಬಂದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದ ವಿರುದ್ಧ ಕ್ರಮ ಜರುಗಿಸಲಾಗುವುದು.
ಪಾಲಿಕೆ ಅಭಿಯಂತ ಅನೂಪ ಕನೋಜ, ಆದಿಲ್ ಖಾನ ಪಠಾಣ, ವಿವೇಕ ಮಠದ ಇತರರಿದ್ದರು.
ಸ್ವಾತಂತ್ರ್ಯೋತ್ಸವ ಸ್ವಾಗತ ಸಮಿತಿ ಸಭೆ
ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯ ಸ್ವಾಗತ ಸಮಿತಿಯ ಪೂರ್ವಭಾವಿ ಸಭೆ ಜರುಗಿತು. ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ಅತಿಥಿಗಳ, ಗಣ್ಯರ ಶಿಷ್ಟಾಚಾರ ಪಾಲನೆ, ಜಿಲ್ಲಾ ಕ್ರೀಡಾಂಗಣ ಹಾಗೂ ಕುಮಾರ ಗಂಧರ್ವ ರಂಗಮಂದಿರದಲ್ಲಿ ವೇದಿಕೆಗಳ ಸಿದ್ಧತೆ, ನಗರದ ಹಾಗೂ ವರ್ತುಲಗಳ ಸ್ವಚ್ಛತೆ, ಅಲಂಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಚರ್ಚೆಯಲ್ಲಿ ಸಮಿತಿ ಸದಸ್ಯರು ಹಲವಾರು ಸಲಹೆ ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ಕಾರ್ತಿಕ್.ಎಂ., ಉಪ ಆಯುಕ್ತ ಉದಯಕುಮಾರ ಟಿ.ಬಿ.,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಇತರರಿದ್ದರು.