ಬಡಕುಂದ್ರಿ ಗ್ರಾಮದ ಮಾನೆ ತೋಟದ ಬಳಿ ಅಳವಡಿಸಿದ್ದ ಹೆಚ್ಚುವರಿ ವಿದ್ಯುತ್ ಪರಿವರ್ತಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಾವೀರ ನಿಲಜಗಿ, ಅಜಿತ ಮುನ್ನೋಳಿ, ಪೃಥ್ವಿ ಕತ್ತಿ, ನೇಮಿನಾಥ ಖೇಮಲಾಪೂರೆ ಇತರರಿದ್ದರು. 
ಬೆಳಗಾವಿ

ವಿದ್ಯುತ್ ದುರ್ಬಳಕೆ ತಡೆಗೆ ಕ್ರಮವಹಿಸಿ

ವಿದ್ಯುತ್ ದುರ್ಬಳಕೆ ತಡೆಗೆ ಕ್ರಮವಹಿಸಿ
ಹುಕ್ಕೇರಿ: ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಕಾರಣ ಅನಧಿಕೃತ ಪಂಪಸೆಟ್‌ಗಳಿಂದ ವಿದ್ಯುತ್ ದುರ್ಬಳಕೆ ಆಗದಂತೆ ರೈತರು ಗಮನಿಸಬೇಕು ಎಂದು ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಮಂಗಳವಾರ ಮಾನೆ ತೋಟದ ಬಳಿ ಅಳವಡಿಸಿದ್ದ ನೂತನ ಹೆಚ್ಚುವರಿ ವಿದ್ಯುತ್ ಪರಿವರ್ತಕ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳಿಗೆ ಹೆಚ್ಚು ವಿದ್ಯುತ್ ಬೇಕಾಗುತ್ತದೆ. ಆದ್ದರಿಂದ ಅಧಿಕೃತ ಜೋಡಣೆ ಅನುಸಾರ ಟಿಸಿ ಅಳವಡಿಸಲಾಗುತ್ತದೆ. ಅನಧಿಕೃತ ಸಂಪರ್ಕದಿಂದ ಒತ್ತಡ ಹೆಚ್ಚಾಗಿ ಟಿಸಿ ಹಾಳಾಗುವುದರಿಂದ ಹೊಸ ಟಿಸಿ ಜೋಡಣೆ ಆಗುವವರೆಗೆ ನೀರಿನ ಕೊರತೆ ಉಂಟಾಗಿ ಬೆಳೆ ನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಬಳಕೆದಾರರು ಅಧಿಕೃತ ಸಂಪರ್ಕಗಳ ಅನುಸಾರ ನೂತನ ಟಿಸಿ ಅಳವಡಿಸಿ ವಿದ್ಯುತ್ ಕೊರತೆಯಾಗದಂತೆ ಕ್ರಮವಹಿಸುತ್ತೇವೆ ಎಂದರು.
ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ವಾಣಿಜ್ಯ ಮತ್ತು ಗೃಹಬಳಕೆದಾರರು ಹಲವಾರು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಸಂಘದ ಆರ್ಥಿಕ ಸದೃಢತೆಗೆ ಬಾಕಿ ಬಿಲ್ ಸಂದಾಯ ಮಾಡುವಂತೆ ವಿನಂತಿಸಿದರು.
ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ, ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪೂರೆ, ಶಾಖಾಧಿಕಾರಿ ಪ್ರೇಮನಾಥ ಪಾಟೀಲ, ವಿರೂಪಾಕ್ಷ ನಿಪ್ಪಾಣಿ, ಪರಪ್ಪ ವಾಸೇದಾರ, ಕೆಂಪಣ್ಣ ಚೌಗಲಾ, ಮಲ್ಲೇಶಿ ಗುಡಸಿ,
ಎಚ್.ಎಲ್. ಪೂಜೇರಿ, ಅಡಿವೆಪ್ಪ ಚೌಗಲಾ, ಶಂಕರ ಶಿರಗಾಂವಿ, ಆನಂದ ಚೌಗಲಾ, ಮಲ್ಲಪ್ಪ ಗಂಡ್ರೋಳಿ ಇತರರು ಇದ್ದರು.
11-1