ಮಶಾಸನ ಹೆಚ್ಚಳಕ್ಕೆ ಒತ್ತಾಯ 
ಬೆಳಗಾವಿ

ದೇವದಾಸಿಯರಿಗೆ ಮಶಾಸನ ಹಣ ಹೆಚ್ಚಿಸಿ

ದೇವದಾಸಿಯರಿಗೆ ಮಶಾಸನ ಹೆಚ್ಚಿಸಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ: ದೇವದಾಸಿ ಮಹಿಳೆಯರಿಗೆ ಈಗ ನೀಡುತ್ತಿರುವ ಮಶಾಸನ ರೂ.3 ಸಾವಿರದಿಂದ 5 ಸಾವಿರ ರೂ.ಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಸಂಸ್ಥೆ ಬೇಡಿಕೆ ಸಲ್ಲಿಸುವಂತೆ ಒತ್ತಾಯಿಸಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾದಿಂದ ಗುರುವಾರ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿರುವ 48 ಸಾವಿರ ದೇವದಾಸಿ ಮಹಿಳೆಯರಿಗೆ ವ್ಯವಸಾಯ ಮಾಡಲು ಪ್ರತಿ ಮಹಿಳೆಯರಿಗೆ ಎರಡು ಜಮೀನು ನೀಡುವುದು, ಉದ್ಯೋಗ ಮತ್ತು ಕೃಷಿ ಮಾಡಲು ಸಾಲ ಸೌಲಭ್ಯ ಕಲ್ಪಿಸಬೇಕು,ಅಂತ್ಯೋದಯ ಪಡಿತರ ಚೀಟಿ ನೀಡುವುದು,ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವುದು,ದೇವದಾಸಿ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಸೀತವ್ವಾ ಜೋಡಟ್ಟಿ, ಯಲ್ಲವ್ವಾ ಪರಸನ್ನವರ, ಯಮನವ್ವಾ ಮಾದರ, ರೇಖಾ ಕಾಂಬಳೆ, ರೇಖಾ ಭಂಡಾರಿ, ಸಾಗರ ಶಿವಕ್ಕನ್ನವರ ಇತರರಿದ್ದರು.