ರಾಮದುರ್ಗ ನಗರದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎ.ಎ.ಮುರ್ತೋಜಿ ಹಾಗೂ ಶಿಕ್ಷಕರು ಇದ್ದರು. 
ಬೆಳಗಾವಿ

ಸುರೇಶ ಅಧ್ಯಕ್ಷ, ನಿಂಗಪ್ಪ ಉಪಾಧ್ಯಕ್ಷ

ರಾಮದುರ್ಗ: ಇಲ್ಲಿನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ವೈ.ಗದಿಗೆನ್ನವರ ಹೇಳಿದರು.
ನಗರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಗುರುವಾರ ಮಾತನಾಡಿ, ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುರೇಶ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಶಿವಲಿಂಗಪ್ಪ ಹುರಕಡ್ಲಿ, ಖಜಾಂಚಿಯಾಗಿ ರವೀಂದ್ರ ಕೀಲಿಪುಟ್ಟಿ, ಉಪಾಧ್ಯಕ್ಷರಾಗಿ ನಿಂಗಪ್ಪ ಭಜಂತ್ರಿ, ಮಹಿಳಾ ಉಪಾಧ್ಯಕ್ಷರಾಗಿ ಮಹಾದೇವಿ ಪಾಣಿ, ಸಾಮಾನ್ಯ ಸಹ ಕಾರ್ಯದರ್ಶಿಯಾಗಿ ರಜೀಯಾ ಹುಸೇನ್ ಬಾಷಾ, ಮಹಿಳಾ ಸಹ ಕಾರ್ಯದರ್ಶಿಯಾಗಿ ಶ್ರೀದೇವಿ ಅಂಬಲಿ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಗಾಣಗಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ತಾರಾಮತಿ ಹಿರಿಚನ್ನವರ, ತಾಲೂಕು ಗೌರವಾಧ್ಯಕ್ಷರಾಗಿ ಪರಪ್ಪ ಕುಂಬಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಬೂದಿ, ನಿರ್ದೇಶಕರಾಗಿ ಲಕ್ಷ್ಮಣ ಅಣ್ಣಿಗೇರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ಎ.ಎ.ಮುರ್ತೋಜಿ ಹಾಗೂ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದರು.