Suicide by hanging 
ಬೆಳಗಾವಿ

ಮದ್ಯ ಕುಡಿಯಲು ಸಿಗದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ

ವಿಠ್ಠಲ ಹಣಮಂತ ಬಾಳೇಕುಂದ್ರಿ
ಹಿರೇಬಾಗೇವಾಡಿ: ಕುಡಿತದ ಚಟದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಪಟ್ಟಣದ ದೊಡ್ಡ ಓಣಿಯ ಪ್ರದಿಪ ಬಸವರಾಜ ಹಾದಿಮನಿ (39) ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾಲ್ಕೆದು ದಿನಗಳಿಂದ ಸಾರಾಯಿ ಕುಡಿಯದೆ ಇದ್ದಿದ್ದರಿಂದ ಮಾನಸಿಕ ಸಮತೋಲನ ಕಳೆದುಕೊಂಡವರಂತೆ ವರ್ತಿಸುತ್ತಿದ್ದ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಿರೇಬಾಗೇವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.