ಕೌಟುಂಬಿಕ ಕಲಹ, ಗೃಹಿಣಿ ಆತ್ಮಹತ್ಯೆ
- ಕೌಟುಂಬಿಕ ಕಲಹ
- ಮಹಿಳೆ ಆತ್ಮಹತ್ಯೆ
- ಮನನೊಂದ ಪತಿ ಆತ್ಮಹತ್ಯೆಗೆ ಯತ್ನ
ಕೌಟುಂಬಿಕ ಕಲಹದಿಂದ ಬೆಸತ್ತು ಗೃಹಣಿ ಆತ್ಮಹತ್ಯೆ
ಚಿಕ್ಕೋಡಿ : ಕೌಟುಂಬಿಕ ಕಲಹದಿಂದ ಬೆಸತ್ತು ಗೃಹಿಣಿಯೊರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗರಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ನಾಗರಾಳ ಗ್ರಾಮದ ಉಮಾಶ್ರೀ ಹೆಗ್ಗಣ್ಣವರ(೨೪) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತ್ನಿಯ ಆತ್ಮಹತ್ಯೆಯಿಂದ ಮನನೊಂದು ಪತಿ ಲಗಮಣ್ಣ ಹೆಗ್ಗಣ್ಣವರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನಿಗೆ ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಉಮಾಶ್ರೀ ಹೆಗ್ಗಣ್ಣವರ ಹಾಗೂ ಲಗಮಣ್ಣ ಹೆಗ್ಗಣ್ಣವರ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಕಳೆದ ಕೆಲ ದಿನಗಳಿಂದ ಮನೆಯಲ್ಲಿ ಕೌಟುಂಬಿಕ ಕಲಹ ಉಂಟಾಗಿ ಉಮಾಶ್ರೀ ಸಾವಿಗೆ ಶರಣನಾಗಿದ್ದಾಳೆ. ಪತಿಯ ಕುಟುಂಬಸ್ಥರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಉಮಾಶ್ರೀ ಪಾಲಕರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.