ಬೆಂಕಿ ಅವಘಡ 
ಬೆಳಗಾವಿ

ಬೆಂಕಿಯಿಂದ 40 ಎಕರೆ ಕಬ್ಬು ನಾಶ

ಧರ್ಮರಾಜ ರಾಮನಗೌಡ ಪಾಟೀಲ
ಬೋರಗಾಂವ: ಪಟ್ಟಣದ ಬ್ಯಾರೇಜ್ ರಸ್ತೆಯಲ್ಲಿರುವ ಲಕ್ಷ್ಮೀ ತೋಟದ ಬಳಿ ಮಂಗಳವಾರ ಬೆಂಕಿ ಅವಘಡದಲ್ಲಿ 40 ಎಕರೆಗೂ ಹೆಚ್ಚು ಕಬ್ಬು ಸುಟ್ಟು ಕರಕಲಾಗಿದೆ. ರೈತರಾದ ಅಭಿನಂದನ ಪಾಟೀಲ, ಬಾಬಾಸಾಹೇಬ ಪಾಟೀಲ, ಸುರೇಶ ಪಾಟೀಲ, ಕುಮಾರ ಪಾಟೀಲ, ರಾಜು ಮಾನಕಾಪುರೆ, ಅಭಯ ಮಾನಕಾಪುರೆ, ಸುಭಾಷ ಮಿಂಚೆ, ರಾಜಶ್ರೀ ಕಳ್ಳಿಮಣಿ, ರಾಜು ಹವಲೆ, ಅಣ್ಣಾಸಾಹೇಬ ಹವಲೆ, ಕಿಶೋರ ಮಹಾಜನ, ಸುಭಾಷ ಸೋಮಾನೆ, ಅಮಿತ್ ಬಂಕಾಪುರೆ, ಹರ್ಷದ ಹವಲೆ, ಪೋಪಟ್ ಟೊನ್ನೆ, ಮಹಾವೀರ ಹವಲೆ, ಕುಮಾರ ನಾಂಗ್ರೆ, ಸಿದಗೊಂಡ ಪಾಟೀಲ, ಶಾಂತಿನಾಥ ಪಾಟೀಲ, ಗುಂಡೂರಾವ ಟಾರೆ ಅವರಿಗೆ ಸೇರಿದ 40 ಎಕರೆ ಕಬ್ಬು ಸುಟ್ಟಿದೆ. ಮಾಹಿತಿ ತಿಳಿದ ಜೈನಾಪುರದ ಅರಿಹಂತ ಶುಗರ್ಸ್ ಎಂಡಿ ಅಭಿನಂದನ ಪಾಟೀಲ ತಕ್ಷಣ ಕಾರ್ಖಾನೆ, ಕೃಷಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕಬ್ಬು ಕಟಾವಿಗೆ ವ್ಯವಸ್ಥೆ ಮಾಡಿದರು.