ಖಾನಪೇಠದ ಶ್ರೀ ಧನಲಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಷೇರುದಾರರಿಗೆ ರಿಯಾಯಿತಿ ದರದ ಸಕ್ಕರೆ ವಿತರಣೆಗೆ ಚಾಲನೆ ನೀಡಲಾಯಿತು. ಚನ್ನಮಲ್ಲ ಶಿವಾಚಾರ್ಯರು, ಮಹಾದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಬಸವರಾಜ ಹಿರೇರಡ್ಡಿ, ಬಿ.ಎಂ.ತುಪ್ಪದ, ಗೋಪಾಲ ಸಂಶಿ, ಎಂ.ಎಂ.ಆತಾರ ಇತರರಿದ್ದರು.
- ಮಹಾದೇವಪ್ಪ ಯಾದವಾಡ ಮಾಹಿತಿ
- ಧನಲಕ್ಷ್ಮೀ ಶುಗರ್ಸ್‌ನಲ್ಲಿ ವಿತರಣೆ
ಧನಲಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆ ಷೇರುದಾರರಿಗೆ ನಾಗಪಂಚಮಿ ನಿಮಿತ್ತ 14 ವರ್ಷಗಳಿಂದ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗುತ್ತಿದೆ ಎಂದು ಧನಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಖಾನಪೇಠ ಧನಲಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಷೇರುದಾರರಿಗೆ ರಿಯಾಯಿತಿ ದರದ ಸಕ್ಕರೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ ಷೇರು ಸರ್ಟಿಫಿಕೇಟ್ ತೋರಿಸಿ ಸಕ್ಕರೆ ಪಡೆದುಕೊಳ್ಳಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಹಾಗೂ ಧನಲಕ್ಷ್ಮೀ ಶುಗರ್ಸ್ ನಿರ್ದೇಶಕ ಬಸವರಾಜ ಹಿರೇರಡ್ಡಿ ಮಾತನಾಡಿ, ಎಲ್ಲರೂ ಒಗ್ಗೂಡಿ ರೈತರ ಏಳಿಗೆ ಹಾಗೂ ಕಾರ್ಖಾನೆ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ರೈತರು ಹಾಗೂ ಷೇರುದಾರರು ಸಹಕಾರ ನೀಡಬೇಕು ಎಂದರು.
ಕಿಲ್ಲಾ ತೊರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾರ್ಖಾನೆ ಉಪಾಧ್ಯಕ್ಷ ಬಿ.ಎಸ್.ಬೆಳವಣಕಿ, ನಿರ್ದೇಶಕರಾದ ಬಸವರಾಜ ಹಿರೇರಡ್ಡಿ, ಬಿ.ಎಂ.ತುಪ್ಪದ, ಗೋಪಾಲ ಸಂಶಿ, ಎಂ.ಎಂ. ಆತಾರ, ಬಸನಗೌಡ ದ್ಯಾಮನಗೌಡ್ರ, ಐ.ಎಸ್.ಹರನಟ್ಟಿ, ಈರಣ್ಣ ಕಾಮನ್ನವರ, ಬಿ.ಎಸ್.ಸಿದರಡ್ಡಿ, ಭೀಮಪ್ಪ ಬಸಿಡೋಣಿ, ಚಂದ್ರು ರಜಪೂತ, ಪರಪ್ಪ ಜಂಗವಾಡ, ಅಡಿವೆಪ್ಪ ಸುರಗ, ಶಿವಾನಂದ ಮುಷ್ಠಿಗೇರಿ, ಅನ್ನಪೂರ್ಣಾ ಪಾಟೀಲ, ಶಶಿಕಲಾ ಸೋಮಗೊಂಡ, ಎಂಡಿ ಶಾಹೀನ ಅಖ್ತರ್ ಇತರರಿದ್ದರು.