ಕೆಎಲ್‌ಇ ಸಂಸ್ಥೆ ಮಲಗೌಡ ಪಾಟೀಲ ಪದವಿಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆಗೈದ ರೇಷ್ಮಾ ಸೂರ್ಯವಂಶಿ, ಮಹಾನಂದಾ ಬಾಪಕರ ಮತ್ತು ಪ್ರಮೋದ ಟೊಣ್ಣೆ ಅವರನ್ನು ಸನ್ಮಾನಿಸಲಾಯಿತು. ಜಗದೀಶ ಬಿಸೇರೊಟ್ಟಿ ಇತರರಿದ್ದರು. 
ಬೆಳಗಾವಿ

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

ಪ್ರಶಾಂತ ಹೂಗಾರ
ರಾಯಬಾಗ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಮುನ್ನಡೆದರೆ ಯಶಸ್ಸು ಸಾಧಿಸಲು ಸಾಧ್ಯವೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರು ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಿಂದ ದೂರವಿದ್ದು, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೆಎಲ್‌ಇ ಸಂಸ್ಥೆ ಸಮಾಜಕ್ಕೆ ಅನೇಕ ಮಹಾನ್ ವ್ಯಕ್ತಿಗಳನ್ನು ನೀಡಿರುವ ಹೆಗ್ಗಳಿಕೆ ಇದೆ ಎಂದರು. ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆಗೈದ ರೇಷ್ಮಾ ಸೂರ್ಯವಂಶಿ, ಮಹಾನಂದಾ ಬಾಪಕರ ಮತ್ತು ಪ್ರಮೋದ ಟೊಣ್ಣೆ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಆರ್.ಕೆ.ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಎ.ಎಂ.ಕುಲಗುಡೆ, ಸದಸ್ಯರಾದ ಎಂ.ಎಂ.ನಿಸಾನದಾರ್, ಡಿ.ಎಲ್.ಮಿರ್ಜೆ, ವಿ.ಪಿ.ಪಾಟೀಲ, ಎಲ್.ಬಿ.ಪಾಟೀಲ, ಉಪನ್ಯಾಸಕರಾದ ಆರ್.ಎಸ್.ಬುಗಡಿಕಟ್ಟಿ, ಎ.ಜೆ.ಹಂಜಿ, ಎಂ.ಆರ್.ಹೊಸಮನಿ, ಎಸ್.ಎಚ್.ಕರಿಗಾರ, ಪಿ.ಪಿ.ಪವಾರ, ಎಂ.ವೈ.ದಳವಾಯಿ, ಎ.ಪಿ.ಸಾಬಳೆ ಇತರರಿದ್ದರು.
ಉಪನ್ಯಾಸಕ ಎಂ.ಡಿ.ಶಿಂಗಾಡೆ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಪಿ.ಪಿ.ಪವಾರ ಸ್ವಾಗತಿಸಿ, ಎಸ್.ಬಿ.ಗಸ್ತಿ ನಿರೂಪಿಸಿ, ಪಿ.ಬಿ.ಪಾಟೀಲ ವಂದಿಸಿದರು.