ಹಿಡಕಲ್ಲ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಬೀರೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ ಸಮಾರಂಭದಲ್ಲಿ ಟಿ.ಎಸ್.ವಂಟಗೂಡಿ ಮಾತನಾಡಿದರು. ರೇಖಾ ಬೀಳಗಿ, ಬಿ.ಎಂ.ಮೆಣಸಿ ಇತರರಿದ್ದರು.
ರಾಯಬಾಗ: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಿದಲ್ಲಿ ಸಾಧನೆ ಸಾಧ್ಯ ಎಂದು ಹಾರೂಗೇರಿಯ ಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಸ್.ವಂಟಗೂಡಿ ಹೇಳಿದರು.
ತಾಲೂಕಿನ ಹಿಡಕಲ್ಲ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಬೀರೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
ಸಂಸ್ಥೆ ಅಧ್ಯಕ್ಷೆ ರೇಖಾ ಬೀಳಗಿ, ಬಿ.ಎಂ.ಮೆಣಸಿ, ಪಾಂಡುರಂಗ ಮೆಕ್ಕಳಕಿ, ರಾಘು ಸಿಂಪಿ, ಸವಿತಾ ಗಲಗಲಿ, ಸಿದ್ದಪ್ಪ ಅಲಕನೂರ, ಲಕ್ಷ್ಮಿ ಹೋಳ್ಕರ, ಸಂಜೀವ ಕಲಾಲ, ರೇವಪ್ಪ ಜೋಡಟ್ಟಿ, ಸುನಂದಾ ಬೀಳಗಿ, ಜ್ಞಾನದೇವ ಸಾಂಬರೆ, ಎಂ.ಐ.ಪಾಟೀಲ, ಬೀರಸಿದ್ಧ ಬಿಳಗಿ, ಬಸವರಾಜ ಕಾಮಾನಿ, ಸಿದ್ದಪ್ಪ ಹೊಸಟ್ಟಿ ಇತರರಿದ್ದರು. ಮುಖ್ಯಶಿಕ್ಷಕ ಬೀರಪ್ಪ ತಡಸಲೂರ ಸ್ವಾಗತಿಸಿದರು. ಚುಟುಕು ಸಾಹಿತಿ ಡಿ.ಎಂ.ಕೋಳಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ವಿ.ಆಂಟಿನ ವಂದಿಸಿದರು.