ಅಂಕಲಿಯ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನಕ್ಕೆ ಗಣ್ಯರು ಚಾಲನೆ ನೀಡಿದರು. ಆರ್.ಎಸ್.ಸೀತಾರಾಮ, ಡಾ.ಶಂಕರ ತೋರಸೆ, ಜ್ಯೋತಿ ತಮ್ಮಗೌಡ, ಸುರೇಶ ಪಾಟೀಲ, ವಿಜಯ ನಾಯಕ ಇತರರಿದ್ದರು. 
ಬೆಳಗಾವಿ

ಸತತ ಪರಿಶ್ರಮದಿಂದ ಸಾಧನೆ ಸಾಧ್ಯ

ವಿದ್ಯಾ ಶೆಟ್ಟನಗೌಡ್ರ
ಮಾಂಜರಿ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹಾಗೂ ಸತತ ಪರಿಶ್ರಮದಿಂದ ಅಧ್ಯಯನ ಮಾಡುವುದರಿಂದ ಸಾಧನೆ ಸಾಧ್ಯ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ನಿರ್ದೇಶಕ ಆರ್.ಎಸ್.ಸೀತಾರಾಮ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿಯ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ ಸಮಾರಂಭದಲ್ಲಿ ಮಾತನಾಡಿ, ಕೆಎಲ್‌ಇ ಸಂಸ್ಥೆ ನೀಡುತ್ತಿರುವ ಶಿಕ್ಷಣದಿಂದ ಮಕ್ಕಳು ಪ್ರತಿಭಾವಂತರಾಗಿ ಮಾನವೀಯ ಮೌಲ್ಯ ರೂಢಿಸಿಕೊಂಡು ಬೆಳೆಯುತ್ತಾರೆ. ವಿದ್ಯಾರ್ಥಿಗಳ ಕಲಿಕೆಗಾಗಿ ಡಾ.ಪ್ರಭಾಕರ ಕೋರೆ ಅವರು ಆಧುನಿಕ ತಂತ್ರಜ್ಞಾನ ಸೌಲಭ್ಯ ಒದಗಿಸಿದ್ದಾರೆ. ಮಕ್ಕಳು ಇದನ್ನು ಉಪಯೋಗಿಸಿಕೊಂಡು ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕು ಎಂದರು. 

ಸ್ಥಾನಿಕ ಸಲಹಾ ಸಮಿತಿ ಸದಸ್ಯ ಸುರೇಶ ಪಾಟೀಲ ಮಾತನಾಡಿದರು. ಡಾ.ಶಂಕರ ತೋರಸೆ, ಪ್ರಾಚಾರ್ಯ ಜ್ಯೋತಿ ತಮ್ಮಗೌಡ ಸ್ವಾಗತಿಸಿದರು. ವಿಜಯ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಬಿ.ಚೌಗುಲಾ ಪರಿಚಯಿಸಿದರು. ಡಿ.ಎಸ್. ಬಾಕಳೆ ನಿರೂಪಿಸಿದರು. ಎ.ಡಿ.ಜಾಧವ ವಂದಿಸಿದರು.