ಐನಾಪುರ ಪಟ್ಟಣದ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರನ್ನು ಸನ್ಮಾನಿಸಲಾಯಿತು. ರಾಜೇಂದ್ರ ಪೋತದಾರ, ಸಂಜು ಭಿರಡಿ, ಡಾ.ಬಿ.ಪ್ರೇಮಾನಂದ ಇತರರಿದ್ದರು.
ತಾಲೂಕಿನ ಐನಾಪುರ ಪಟ್ಟಣದಲ್ಲಿ ಸೋಮವಾರ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಸ್ತು, ಸಮಯಪಾಲನೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ
ಹೆಚ್ಚಿನ ಜ್ಞಾನ ಪಡೆಯುವ ಮೂಲಕ ಉನ್ನತ ಗುರಿ ಮುಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಸಾಧಕರಾದ ಐಶ್ವರ್ಯಾ ಉಮರಾಣಿ, ಶ್ರೇಯಾ ಪಾಟೀಲ, ಪ್ರಿಯಾ ಕದ್ದು, ಸಷ್ಟಿ ಖೋತ, ಅಂಕಿತಾ ನರೋಟೆ, ವೈಷ್ಣವಿ ಕಾಗಲಿ, ಪ್ರತೀಕ್ಷಾ ನಾಮದಾರ, ಅಶ್ವಿನಿ ಭಿರಡಿ, ಸಿದ್ಧಾಂತ ಸತ್ತಿಕರ ಹಾಗೂ ಪಿಯುಸಿ ಸಾಧಕರಾದ ಜ್ಯೋತಿ ಮಾಂಗ, ಗಾಯತ್ರಿ ಮಾದರ, ಸೌಮ್ಯಾ ಸಾಳುಂಕೆ, ಸವಿತಾ ಹಾಲಾರೊಟ್ಟಿ, ಅರ್ಚನಾ ಬ್ರಿಷ್ಠಾಣಿ, ವರ್ಷಾ ಪವಾರ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆ ಉಪಾಧ್ಯಕ್ಷ ಸಂಜು ಭಿರಡಿ, ಪ್ರಾಚಾರ್ಯ ಡಾ.ಬಿ.ಪ್ರೇಮಾನಂದ, ಉಪ ಪ್ರಾಚಾರ್ಯ ಎ.ಎಂ.ಹುಲ್ಲೆನ್ನವರ, ನಿರ್ದೇಶಕರಾದ ತಮ್ಮಣ್ಣ ಪಾರಶೆಟ್ಟಿ, ಪ್ರವೀಣ ಕುಲಕರ್ಣಿ, ಉದಯ ನಿಡಗುಂದಿ,