ಕೊಕಟನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಪೂ ಕಾಲೇಜು ಗಳ ತಾಲೂಕುಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ, ಸಿದ್ದಪ್ಪ ಮುದಕಣ್ಣವರ, ಗುರುಮೂರ್ತಯ್ಯ ಕಾಡದೇವರಮಠ, ಸುರೇಶ ನಾಯಿಕ ಇತರರಿದ್ದರು.
- ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ ಅನಿಸಿಕೆ
- ತಾಲೂಕುಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ
ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಸೃಜನಶೀಲರಾಗಲು ಸಾಧ್ಯ ಎಂದು ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕೊಕಟನೂರ ಪಿಯು ಕಾಲೇಜು ಹಾಗೂ ರಡ್ಡೇರಹಟ್ಟಿ ಎನ್.ಬಿ.ಸಾವಂತ ಪಪೂ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಪಪೂ ಕಾಲೇಜುಗಳ ತಾಲೂಕುಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ದೇಶೀಯ ಸಂಸ್ಕೃತಿ, ಸಂಸ್ಕಾರ ಮರೀಚಿಕೆಯಾಗುತ್ತಿವೆ. ಭಾಷೆ ಯಾವುದೇ ಇರಲಿ ದೇಶ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನವಿರಬೇಕು. ಕನ್ನಡ ಭಾಷೆ ಜತೆ ಕಲೆ, ಸಾಂಸ್ಕೃತಿಕ ಅಭಿರುಚಿ ರೂಢಿಸಿಕೊಂಡು ಜನ ಮನ್ನಣೆ ಪಡೆಯುವುದರೊಂದಿಗೆ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ಅಥಣಿ ತಾಲೂಕಿನಲ್ಲಿಯೇ ಪ್ರಸಿದ್ಧಿಯಾಗಿರುವ ಕೊಕಟನೂರ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಭಾಗವಹಿಸಿ ತಮ್ಮ ಪ್ರತಿಭೆ ಹೊರಹಾಕಬೇಕು ಎಂದು ತಿಳಿಸಿದರು. ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಗಮನದಲ್ಲಿಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಪ್ರಾಚಾರ್ಯ ಸುರೇಶ ನಾಯಿಕ ಮಾತನಾಡಿದರು. ಬಳಿಕ ಅಥಣಿ ತಾಲೂಕಿನ ೩೯ ಪಪೂ ಕಾಲೇಜಿನ ವಿದ್ಯಾರ್ಥಿಗಳಿಂದ ರಂಗೋಲಿ, ಚರ್ಚಾ, ಪ್ರಬಂಧ, ರಸಪ್ರಶ್ನೆ, ಜನಪದ, ಏಕಾಭಿನಯ ಸೇರಿ ವಿವಿಧ ಸ್ಪರ್ಧೆ ನಡೆದವು.
ಮುಖಂಡರಾದ ಮಹಾವೀರ ಹಳಕಿ, ಲಕ್ಷ್ಮಣ ಮಗರ, ಲಕ್ಷ್ಮಣ ಮರೆಗುದ್ದಿ, ಡಾ.ಎಂ.ಎ.ಚನ್ನಾಪುರ, ಎಂ.ಪಿ.ಮೇತ್ರಿ, ಎಸ್.ಎ.ಮಸಾಳೆ, ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಜಯಶ್ರೀ ಕಾಂಬಳೆ, ಗುಳಪ್ಪ ಪೂಜಾರಿ, ಜಿ.ಎಂ.ಚನಗೊಂಡ ಇತರರಿದ್ದರು. ಡಿ.ಎಸ್.ಹುಲ್ಲೆಣ್ಣವರ ಸ್ವಾಗತಿಸಿದರು. ಚಿದಾನಂದ ಮಗದುಮ್ಮ ನಿರೂಪಿಸಿದರು. ರತನ ಅಂಬಾಜಿ ವಂದಿಸಿದರು.