ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಝಿರಲಿ ಮಾತನಾಡಿದರು. 
ಬೆಳಗಾವಿ

ಜ.23ರಂದು ಸುಭಾಷಚಂದ್ರ ಭೋಸರ 129ನೇ ಜಯಂತಿ

 ಬೆಳಗಾವಿ:ನೇತಾಜಿ ಸುಭಾಷಚಂದ್ರ ಭೋಸರ 129ನೇ ಜಯಂತಿ (ಪರಾಕ್ರಮ ದಿವಸ), ಸಂಸ್ಥೆಯ 25ನೇ ವಾರ್ಷಿಕೋತ್ಸವ (ಬೆಳ್ಳಿ ಮಹೋತ್ಸವ) ಸಮಾರಂಭ ಹಾಗೂ ಬೆಳ್ಳಿ ಬೆಡಗು ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ನೇತಾಜಿ ಸುಭಾಷಚಂದ್ರ ಭೋಸ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಂಸ್ಥಾಪಕ ಎಂ.ಬಿ.ಝಿರಲಿ ತಿಳಿಸಿದರು. 
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯ ಡಾ.ಬಿ.ಎಸ್.ಜೀರಗೆ ಆಡಿಟೋರಿಯಂ ಸಭಾಂಗಣದಲ್ಲಿ ಜ.23ರಂದು ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೇತಾಜಿ ಜೀವನ ಸಂದೇಶ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯವಾಹ ರಾಘವೇಂದ್ರ ಕಾಗವಾಡ ಉಪನ್ಯಾಸ ನೀಡಲಿದ್ದಾರೆ ಎಂದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಕಿರಣ ಅಗಡಿ, ರಮೇಶ ತುಬಚಿ, ಡಾ.ವಿನೋದ ದೊಡ್ಡಣ್ಣವರ, ಪ್ರಭಾಕರ ನಾಗರಮುನೊಳ್ಳಿ, ಉಮೇಶ ಕಲಘಟಗಿ, ನಾಗರತ್ನಾ ರಾಮಗೌಡಾ ಹಾಗೂ ಡಾ.ಗುರುದೇವಿ ಹುಲೆಪ್ಪನವರಮಠ ಅವರಿಗೆ ನೇತಾಜಿ ಸುಭಾಷಚಂದ್ರ ಭೋಸ್  ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೆ, ಸೊಸೈಟಿಯಲ್ಲಿ ಮೊದಲ ಹಂತದಲ್ಲಿ ಸಹಕಾರ ನೀಡಿ ಪ್ರೋತ್ಸಾಹಿಸಿದ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ,ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಲಕ್ಷ್ಮಣ ಸವದಿ, ಅಭಯ ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಅನಿಲ ಬೆನಕೆ, ಉದ್ಯಮಿ ವಿಜಯ ಮೆಟಗುಡ್ಡ ಇತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಅಧ್ಯಕ್ಷ ಭೀಮಸೇನ್ ಝಿರಲಿ,  ಉಪಾಧ್ಯಕ್ಷ ಡಾ.ಸುಧಾಕರ ಮಹೇಂದ್ರಕರ, ನಿರ್ದೇಶಕರಾದ ಪ್ರವೀಣ ಖಾಡಿ, ರವಿ ಕಟ್ಟಿ, ಮಹಾಂತೇಶ ಹಿರೇಮಠ, ಬಾಲಕೃಷ್ಣ ಧಾಮಣೆಕರ, ಭಗವಂತ ಪಾಟೀಲ, ಉಮೇಶ ಉಪರಿ, ಸೋಮನಾಥ ತಾವರಿ, ಲಕ್ಷ್ಮಣ ಸಾವಂತ, ಲಕ್ಷ್ಮಣ ನಾಯಕ, ಯೋಗಿತಾ ಮರಾಠೆ, ಆರತಿ ಹುರುಡೆ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಇತರರಿದ್ದರು.