ಸಿಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಿವಾನಂದ ಕಮತೆ, ಪಿ.ಬಿ.ಅವಲಕ್ಕಿ ಇತರರಿದ್ದರು. 
ಬೆಳಗಾವಿ

ಏಕಾಗ್ರತೆಯಿಂದ ಅಧ್ಯಯನ ಮಾಡಿ

ರಾಘವೇಂದ್ರಗೌಡ ಭೀ ಪಾಟೀಲ್
ಯಮಕನಮರಡಿಯ ಸಿಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಾಣಿಜ್ಯ ವಿಷಯಗಳ ಕುರಿತು ಮಾಹಿತಿ ನೀಡಿದರು.
ಪ್ರಾ.ಪಿ.ಬಿ.ಅವಲಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧನೆಗೈದ ವಿದ್ಯಾರ್ಥಿಗಳಾದ ಶ್ವೇತಾ ಹಂಚಿನಮನಿ, ಪ್ರೀತಿ ಪಾಸಪ್ಪಗೋಳ, ಸುಮತಿ ಬಿಸಿರೊಟ್ಟಿ ಮತ್ತು ಸ್ನೇಹಾ ಸೂಜಿ ಅವರನ್ನು ಸನ್ಮಾನಿಸಲಾಯಿತು.
ಆರ್.ಎಂ.ಹಂದಿಗುಂದ, ವಿ.ಎಂ.ದುಗ್ಗಾಣಿ, ಸಂಸ್ಥೆ ಎಸ್.ಎಸ್.ತುಬಚಿ, ರಾಜು ತುಬಚಿ, ಅರುಣಾ ಸೂಜಿ, ಮಂಗಲಾ ಕುಂಬಾರ, ಬಿ.ಜಿ.ಹಿರೇಮಠ, ಶ್ರುತಿ ಅಕ್ಕತಂಗೇರಹಾಳ, ಲಕ್ಷ್ಮೀ ಕಮತಗಿ, ಶಾಂತಾ ಕುಂಬಾರ, ಲಕ್ಷ್ಮೀ ದೇಮನಗೋಳ ಇತರರಿದ್ದರು.