ಕಬ್ಬೂರ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಹಾಗೂ ಅನ್ನಪೂರ್ಣಾ ಬಿ.ಬೆಲ್ಲದ ಕಲಾ, ವಾಣಿಜ್ಯ, ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನ ಆಚರಿಸಲಾಯಿತು.
ಕಬ್ಬೂರ: ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು ಅವರ ಮೇಲೆ ರಾಷ್ಟ್ರದ ಅಭಿವೃದ್ಧಿ ನಿಂತಿದೆ. ಆದ್ದರಿಂದ ಹೆಚ್ಚು ಅಧ್ಯಯನ ಮಾಡಿ ವಿದ್ಯಾವಂತರಾಗಬೇಕು ಎಂದು ಸಂಸ್ಥೆ ಅಧ್ಯಕ್ಷ ಮಹೇಶ ಬೆಲ್ಲದ ಹೇಳಿದರು.
ಪಟ್ಟಣದ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಹಾಗೂ ಅನ್ನಪೂರ್ಣಾ ಬೆಲ್ಲದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರು,
ಮಕ್ಕಳ ದಿನಾಚರಣೆ ಉಡುಗೊರೆಯಾಗಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 50,000 ರೂ., ದ್ವಿತೀಯ ಸ್ಥಾನ ಗಳಿಸಿದವರಿಗೆ 25,000 ರೂ. ತೃತೀಯ ಸ್ಥಾನ ಗಳಿಸಿದವರಿಗೆ 10,000 ರೂ., ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದವರಿಗೆ ಹೆಚ್ಚುವರಿಯಾಗಿ 50,000 ರೂ. ಸಂಸ್ಥೆಯ ವತಿಯಿಂದ ಘೋಷಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪಂಕಜ ಬೆಲ್ಲದ, ಮನೋಜ ಬೆಲ್ಲದ, ಸುರೇಶ ಬೆಲ್ಲದ, ಉಪ ಪ್ರಾಂಶುಪಾಲ ರಾಜು ಮಹಿಪತಿ, ಲಕ್ಷ್ಮೀ ಜಿವಣಿ, ಕಿಶೋರಿ ನಿಂಬಾಳ್ಕರ್, ರಮೇಶ ಶೇಡಬಾಳೆ, ಶ್ರೀನಿವಾಸ ಕೇರಿಮನಿ ಇತರರಿದ್ದರು.