ಕಟಕೋಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಟಕೋಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಮಹಾದೇವ ಆತಾರ, ಎಸ್.ಎಸ್.ಢವಣ, ಬಿ.ಎ.ದೇಸಾಯಿ, ಬಸವರಾಜ ಹಲಗತ್ತಿ ಇತರರಿದ್ದರು.
- ಮಹಾದೇವ ಆತಾರ ಅನಿಸಿಕೆ
- ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ದೈಹಿಕ ಬಲವರ್ಧನೆ ಹಾಗೂ ಮಾನಸಿಕ ಏಕಾಗ್ರತೆಗೆ ಕ್ರೀಡೆ ಸಹಕಾರಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿದ್ಯಾವರ್ಧಕ ಸಂಘದ ನಿರ್ದೇಶಕ ಮಹಾದೇವ ಆತಾರ ಎಂದರು.
ಎಸ್‌ಜಿಕೆ ಪ್ರೌಢಶಾಲೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಿಭಾಗದ ಕಟಕೋಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಭೂದಾನಿ ಎಸ್.ಎಸ್.ಢವಣ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳು ಕಾಮನ್‌ವೆಲ್ತ್ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಎಸ್.ವಿ.ದೀವಟಗಿ ಎಸ್.ಬಿ.ಏಣಿ, ಪಿ.ಡಿ.ಕಾಲವಾಡ, ಎಂ.ಎಸ್.ಜಂಗವಾಡ ಇತರರಿದ್ದರು. ಶಿಕ್ಷಕ ಪಿ.ಎಚ್.ಜಾಲಿಬೇರಿ ನಿರೂಪಿಸಿದರು. ಎಸ್.ವಿ.ಕೂಬಿಹಾಳ ಸ್ವಾಗತಿಸಿದರು. ಎಸ್.ಎಂ.ದೀವಟಗಿ ವಂದಿಸಿದರು.