ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಟೆಕ್ನೋ-ಮ್ಯಾನೇಜಮೆಂಟ್ ಸಮ್ಮೇಳನ ಅಶ್ವಮೇಧ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ದರ್ಶನಕುಮಾರ ಬಿಳ್ಳೂರ, ಡಾ.ಸಂಜಯ ಹನಗಂಡಿ, ಪ್ರೊ.ಆನಂದ ಮಿರ್ಜಿ, ಪ್ರೊ.ಐಶ್ವರ್ಯಾ ವಂಟಮುತ್ತೆ ಇತರರಿದ್ದರು.
ಚಿಕ್ಕೋಡಿ:
ಸಮ್ಮೇಳನದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ದರ್ಶನ ಕವಳೆ ತಂಡ ಪ್ರಥಮ, ಸೃಷ್ಟಿ ಕೆಂಚಗೌಡ ತಂಡ ದ್ವಿತೀಯ, ಕೊಡೆಕ್ಸ್ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಕಾಡಗೌಡ್ರ ತಂಡ ಪ್ರಥಮ, ಸಂತೋಷ ಜೋಡಟ್ಟಿ ತಂಡ ದ್ವಿತೀಯ,
ಟ್ರೈಜರ್ ಹಂಟ್ ಸ್ಪರ್ಧೆಯಲ್ಲಿ ಲಕ್ಷ್ಮೀಕಾಂತ ತಳ್ಳಿ ತಂಡ ಪ್ರಥಮ, ಅನುಷಾ ಮಟ್ಟಣ್ಣವರ ದ್ವಿತೀಯ ಸ್ಥಾನ, ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ಸಮರ್ಥ ಗಾಣಿಗೇರ ಪ್ರಥಮ, ಸಾನಿಕಾ ಜಡಗೆ ದ್ವಿತೀಯ ಸ್ಥಾನ, ರೀಲ್ಸ್ ಮೆಕಿಂಗ್ ಸ್ಪರ್ಧೆಯಲ್ಲಿ ಸಂಜನಾ ಶೆಟ್ಟಿ ಪ್ರಥಮ, ಅಭಿಷೇಕ ಮಗದುಮ್ಮ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸಮೂಹ ನೃತ್ಯ ಸ್ಪರ್ಧೆಯಲ್ಲಿ ದಿಯಾ ಪತೊಳೆ ತಂಡ ವಿಜೇತರಾಗಿದ್ದಾರೆ.
ಮಾರ್ಕೆಟಿಂಗ್ ಮೇನಿಯಾ ಸ್ಪರ್ಧೆಯಲ್ಲಿ ವೈಷ್ಣವಿ ಶಿಂತ್ರೆ ತಂಡ ಜಯ ಗಳಿಸಿದೆ. ಡಾ.ಸಂಜಯ ಹನಗಂಡಿ, ಡಾ.ಸಚಿನ ಮೆಕ್ಕಳಕಿ, ಪ್ರೊ.ಆನಂದ ಮಿರ್ಜಿ, ಪ್ರೊ.ಐಶ್ವರ್ಯಾ ವಂಟಮುತ್ತೆ, ಪ್ರೊ.ಜ್ಯೋತಿ ಕಾಗಲಕರ, ಪ್ರೊ.ಅಭಿಲಾಷಾ ಬೊಲವಾಡೆ, ಪ್ರೊ.ಜ್ಯೋತಿ ಕಾಗಲಕರ, ಡಾ.ಸುನೀಲ ಶಿಂಧೆ, ಪ್ರೊ.ರುತುಜಾ ಉಪಾಧ್ಯೆ, ಪ್ರೊ.ಅನಿತಾ ಬಿರಾಜ ಇತರರಿದ್ದರು.