ಕಾಲುವೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ಸಾವು 
ಬೆಳಗಾವಿ

ಕಾಲುವೆಯಲ್ಲಿ ಈಜಲು ಹೋಗಿದ್ದ ವಸತಿ ಶಾಲೆ ವಿದ್ಯಾರ್ಥಿ ಸಾವು

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಈಜಲು ಕಾಲುವೆಗೆ ಹೋಗಿದ್ದ ವಿದ್ಯಾರ್ಥಿ ಸಾವು
  • ವಸತಿ ಶಾಲೆಯ ವಿದ್ಯಾರ್ಥಿ ನಿಧನ
  • ಕಾಲುವೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
  • ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಬಳಿ ಘಟನೆ
ಕಾಲುವೆಗೆ ಈಜಲು ಹೋಗಿದ್ದ ವಸತಿ ಶಾಲೆಯ ವಿದ್ಯಾರ್ಥಿ ಸಾವು : ಪಾಲಕರ ಆಕ್ರೋಶ
ಬೆಳಗಾವಿ : ಕೆನಾಲ್ ಕಾಲುವೆಯಲ್ಲಿ ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ವಸತಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ಲ ಕಾಲು ಜಲಾಶಯದ ಬಳಿಯ ಎಡದಂಡೆವೆ ಬಳಿ ಮಂಗಳವಾರ ನಡೆದಿದೆ.
ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಕಾರ್ತಿಕ ಮಂಜುನಾಥ ಗಾಡಿವಡ್ಡರ (14)ಮೃತ ವಿದ್ಯಾರ್ಥಿ. ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ತರಗತಿಯ ವಿದ್ಯಾರ್ಥಿಗಳಾದ ಕಾರ್ತಿಕ ಗಾಡಿವಡ್ಡರ , ಸಿದ್ದು ಕರೆಪ್ಪ ಮದ್ದೆವಗೋಳ, ಮತ್ತು ಆಕಾಶ ಬಸವರಾಜ ನಾಯ್ಕಿ ಹಿಡಕಲ್ಲ ಜಲಾಶಯದ ಬಳಿಯಿರುವ ಎಡದಂಡೆ ಕಾಲುವೆಯಲ್ಲಿ ಈಜಲು ಹೋದಾಗ,ಕಾರ್ತಿಕ ಗಾಡಿವಡ್ಡರ , ಸಿದ್ದು ಕರೆಪ್ಪ ಮದ್ದೆವಗೋಳ ಕಾಲುವೇ ಇಳಿದಿದ್ದು,ನೀರಿನ ರಭಸಕ್ಕೆ ವಿದ್ಯಾರ್ಥಿಗಳು ಎಳೆದುಕೊಂಡು ಹೋಗಿದ್ದಾರೆ,ಇದರಲ್ಲಿ ಸಿದ್ದು ಮದ್ದೆವಗೋಳ ಅವರನ್ನು ಸ್ಥಳೀಯರು ರಕ್ಷಣೆ ಮಾಡಲಾಯಿತು. ಕಾರ್ತಿಕ ಗಾಡಿವಡ್ಡರ ಅವಘಡದಲ್ಲಿ ಮೃತ ಪಟ್ಟಿದ್ದಾನೆ.ಈ ಕುರಿತು ಯಮಕನರಮಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರ ಆಕ್ರೋಶ: ಮೃತ ಬಾಲಕನ ಕುಟುಂಬಸ್ಥರು ಇದನ್ನು ಸಾವಲ್ಲ ಕೊಲೆ ಎಂದು ಆರೋಪಿಸಿ,ಹುಕ್ಕೇರಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ,ವಸತಿ ಶಾಲೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.