ತೆನಿಕೊಳ್ಳ ಪ್ರವಾಸಿ ಮಂದಿರದ ಆವರಣದಲ್ಲಿ ಮಹಾಂತ ಟ್ರಸ್ಟ್ ವತಿಯಿಂದ ಸಸಿ ನೆಡಲಾಯಿತು. ಮಹಾಂತೇಶ ಪಟಾತರ, ರಮೇಶ ತೋಟಗಿ, ಗಂಗಯ್ಯ ಪೂಜೇರಿ, ಬಸವರಾಜ ಹಾರುಗೋಪ್ಪ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿ ಸಂಘದ ಕಾರ್ಯ ಮಾದರಿ

ರಾಘವೇಂದ್ರಗೌಡ ಭೀ ಪಾಟೀಲ್
ಮುರಗೋಡ: ಬಡವರು ಹಾಗೂ ನಿರ್ಗತಿಕರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಸಂಘಟನೆಯಿಂದ ಆರ್ಥಿಕ ನೆರವು ನೀಡುತ್ತಿರುವ ಹಳೇ ವಿದ್ಯಾರ್ಥಿ ಸಂಘದ ಕಾರ್ಯ ಮಾದರಿಯಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಮಹಾಂತೇಶ ಪಟಾತರ ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಬೀರಪ್ಪ ಜಕಾತಿ, ನಾಗರಾಜ ಕಮ್ಮಾರ, ಶಂಕರ ಮೆಣಸಿನಕಾಯಿ ಸೇರಿದಂತೆ ಅನೇಕರು ಒಗ್ಗೂಡಿ ಟ್ರಸ್ಟ್ ಬೆಳವಣಿಗೆ ಜತೆಗೆ ನಮ್ಮ ಬ್ಯಾಚ್ ಸದಸ್ಯರ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಲಾಗುತ್ತಿದೆ. ವೈಯಕ್ತಿಕ ಹಣಕಾಸಿನ ನೆರವು ನೀಡುತ್ತ ಹೋಗೋಣ. ಜತೆಗೆ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗೌರವಿಸುವ ಕಾರ್ಯ ಮಾಡೋಣ ಎಂದರು.
ಮುಖ್ಯ ಅತಿಥಿ ಹೇಮಾ ಮಲ್ಲಯ್ಯನವಮಠ ಮಾತನಾಡಿ, ಹಳೇ ವಿದ್ಯಾರ್ಥಿಗಳ ಸಂಘದ ಮೂಲಕ ಸಮಾಜಮುಖಿ ಕಾರ್ಯ ಕೈಗೊಂಡು ಮಾದರಿಯಾಗಬೇಕು ಎಂದು ತಿಳಿಸಿದರು.
ತೆನಿಕೊಳ್ಳ ಪ್ರವಾಸಿ ಮಂದಿರದ ಆವರಣದಲ್ಲಿ ಮಹಾಂತ ಟ್ರಸ್ಟ್ ವತಿಯಿಂದ ಸಸಿ ನೆಡಲಾಯಿತು. ಮಹಾಂತೇಶ ಪಟಾತರ, ರಮೇಶ ತೋಟಗಿ, ಗಂಗಯ್ಯ ಪೂಜೇರಿ, ಬಸವರಾಜ ಹಾರುಗೋಪ್ಪ ಇತರರಿದ್ದರು.