ಬೆಳಗಾವಿಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯಲ್ಲಿ ಡಾ.ಎ.ಎಸ್.ಅಮೋಮಠ, ಡಾ.ವಿ.ಪಿ.ಕುರಿ, ಡಿ.ಕೆ.ಕುಲಕರ್ಣಿ, ಡಾ.ಎಸ್.ಕೆ.ತಳವಾರ ಇತರರಿದ್ದಾರೆ.
ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಗುರುವಾರ ಉದ್ಘಾಟನೆಗೊಂಡಿತು.
ಮುನವಳ್ಳಿಯ ಬಿ.ಎಫ್.ಎಲಿಗಾರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಸ್.ಅಮೋಮಠ ಒಕ್ಕೂಟ ಉದ್ಘಾಟಿಸಿ, ವಿದ್ಯಾರ್ಥಿಯ ಭವಿಷ್ಯತ್ತಿನ ವೃತ್ತಿಯ ಕುರಿತಾಗಿ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಪಿ.ಕುರಿ ಅಧ್ಯಕ್ಷತೆ ವಹಿಸಿದ್ದರು. ಐಶ್ವರ್ಯಾ ಸಿ.ಕೆ. ಪ್ರಾರ್ಥಿಸಿದರು. ರತಾ ಕೊಂತಿ ಅವರ ಭರತನಾಟ್ಯ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಸಂಯೋಜಕ ಡಿ.ಕೆ.ಕುಲಕರ್ಣಿ ಸ್ವಾಗತಿಸಿದರು. ಡಾ.ಎಸ್.ಕೆ.ತಳವಾರ ಅತಿಥಿ ಪರಿಚಯಿಸಿದರು. ಪಾಂಡುರಂಗ ಶಿಂಧೆ ಮತ್ತು ಸೃಷ್ಟಿ ಮಠದಕರ ನಿರೂಪಿಸಿದರು. ಒಕ್ಕೂಟ ಕಾರ್ಯದರ್ಶಿ ಮಂಜುನಾಥ ಪೂಜೇರ ವಂದಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳಿದ್ದರು.