ಸತ್ತಿ ಗ್ರಾಮದ ಗಾಯಕವಾಡ ತೋಟದ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಡೆಪ್ಪ ಕುಂಬಾರ, ಪ್ರಭುಲಿಂಗ ಪೂಜಾರಿ, ಸುಜಾತಾ ಸನದಿ, ಆರತಿ ಖೋತ ಇತರರಿದ್ದರು.
ನಂದೇಶ್ವರ: ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಶಿಕ್ಷಕರು ಗುಣಮಟ್ಟದ ಜ್ಞಾನ ಒದಗಿಸಬೇಕೆಂದು ಆಧ್ಯಾತ್ಮಿಕ ಚಿಂತಕ ಪ್ರಭುಲಿಂಗ ಪೂಜಾರಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಗಾಯಕವಾಡ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಸೃಜನಶೀಲ ಕಲಿಕೆಗೆ ಕಲಿಕಾ ಹಬ್ಬ ಪೂರಕವಾಗಿದೆ ಎಂದರು.
ಸತ್ತಿ ವಲಯದ ಸಂಪನ್ಮೂಲ ವ್ಯಕ್ತಿ ಆರತಿ ಖೋತ ಮಾತನಾಡಿ, ಕಲಿಕಾ ಹಬ್ಬ ಹೊಸತನದ ಮೂಲಕ ಕಲಿಯಲು ಮಕ್ಕಳಿಗೆ ಪ್ರೇರಣೆ ನೀಡುತ್ತದೆ ಎಂದರು.
ತಾಪA ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಗ್ರಾಪಂ ಅಧ್ಯಕ್ಷೆ ಸುಜಾತಾ ಸನದಿ, ಎಸ್‌ಡಿಎಂಸಿ ಅಧ್ಯಕ್ಷ ಮುಕಪ್ಪ ಚಮಕೇರಿ, ಶಿವಾನಂದ ಖನಗೌಡರ, ಹನಮಂತ ಚಮಕೇರಿ, ಸಿ.ಆರ್.ಪಿ ಪ್ರಕಾಶ ನಾವಿ, ಶ್ರೀಶೈಲ ಚಮಕೇರಿ, ಶಿವಕುಮಾರ ಬಕಾರಿ, ರೇಖಾ ಗಾಯಕವಾಡ, ಸಹದೇವ ಮೂಡಸಿ, ರಾಮು ಸನದಿ, ಮುಖ್ಯಶಿಕ್ಷಕ ಎಸ್.ಎಂ.ಗಾಣಗಿ, ಐ.ಎಂ.ಕಮಾಲನವರ, ಶಂಭು ಕಾಂಬಳೆ, ಎಂ.ಎಸ್.ಕೋಲಕಾರ, ಕೆ.ಕೆ.ಪತ್ತಾರ, ಬಿ.ಎಸ್.ಜುಗೂಳ, ಬಿ.ಸಿ.ಪೂಜಾರಿ, ಚೇತನಾ ಪಾಟೀಲ, ಶೋಭಾ ಪಾಟೀಲ, ಜಯಶ್ರೀ ಹಂಚಿನಾಳ, ಅಂಬಿಕಾ ಎಚ್.ಜಿ.ಇತರರಿದ್ದರು.