ಮುನವಳ್ಳಿ ಪಟ್ಟಣದಲ್ಲಿ ಮುಖ್ಯರಸ್ತೆ ಬದಿ ಅಲಂಕಾರಿಕ ಬೀದಿದೀಪ ಅಳವಡಿಕೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಈಶ್ವರ ಕರೀಕಟ್ಟಿ, ಡಿ.ಡಿ.ಕಿನ್ನೂರಿ, ಚಂದ್ರು ಪೂಜೇರ ಇತರರಿದ್ದರು. 
ಬೆಳಗಾವಿ

ಮುನವಳ್ಳಿ ಸೌಂದರ್ಯೀಕರಣಕ್ಕೆ ಬೀದಿದೀಪ

ಮುನವಳ್ಳಿ: ಪಟ್ಟಣದ ಸೌಂದರ್ಯೀಕರಣ ಮತ್ತು ಸಾರ್ವಜನಿಕರ ರಾತ್ರಿ ಸಂಚಾರದ ಸುರಕ್ಷತೆ ದೃಷ್ಟಿಯಿಂದ ಪ್ರಮುಖ ರಸ್ತೆಯಲ್ಲಿ ಅಲಂಕಾರಿಕ ಬೀದಿದೀಪ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಮಲಪ್ರಭಾ ನದಿಯ ಹಳೇ ಸೇತುವೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಬೈಲಹೊಂಗಲ ಕ್ರಾಸ್‌ವರೆಗೆ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಯೋಜನೆಯಡಿ 1.77 ಕೋಟಿ ರೂ. ವೆಚ್ಚದಲ್ಲಿ ಅಲಂಕಾರಿಕ ಬೀದಿದೀಪ ಅಳವಡಿಕೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುನವಳ್ಳಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರಯಾಣಿಕರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಸಿ.ಬಿ.ಬಾಳಿ, ನಾಗಪ್ಪ ಕಾಮಣ್ಣವರ, ಕಲ್ಲಪ್ಪ ಕಿತ್ತೂರ, ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ, ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ಚಂದ್ರು ಮುಚ್ಚಂಡಿ, ಪುರಸಭೆ ಸದಸ್ಯರಾದ ಶ್ರೀಶೈಲ ನೇಗಿನಾಳ, ಮೀರಾಸಾಬ್ ವಟ್ನಾಳ, ಸಮೀವುಲ್ಲಾ ಚೂರಿಖಾನ, ಕರೀಂ ಚೋಪದಾರ, ವಿನಾಯಕ ಕಟ್ಟೇಕಾರ, ಪಂಚು ಬಾರಕೇರ, ಐ.ಕೆ.ಖೊಂದುನಾಯ್ಕ, ಅಶೋಕ ಕದಂ, ಬಸವರಾಜ ಚುಳಕಿ, ಶ್ರೀಶೈಲ ಬಾಳಿ, ಎ.ಎಂ.ಕರೀಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ,
ಗುತ್ತಿಗೆದಾರ ಐ.ಎಸ್.ಪಾಟೀಲ ಇತರರಿದ್ದರು.