ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘ ತಾಲೂಕು ಘಟಕ ಪದಾಧಿಕಾರಿಗಳು ತಹಸೀಲ್ದಾರ್ ಮಹಾದೇವ ಸನ್ನಮೂರಿಗೆ ಮನವಿ ಸಲ್ಲಿಸಿದರು. ವಿಜಯ ಶ್ರೇಷ್ಠಿ, ನಿಜಗುಣಿ ನಾವಿ ಇತರರು ಇದ್ದರು.
ರಾಯಬಾಗ: ವಿದ್ಯುತ್ ಸರಬರಾಜು ನಿಗಮ ಖಾಸಗೀಕರಣಗೊಳಿಸುವುದು ವಿರೋಧಿಸಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಮಹಾದೇವ ಸನ್ನಮೂರಿಗೆ ಸೋಮವಾರ ಮನವಿ ಸಲ್ಲಿಸಿದರು.
ಟಾಟಾ ಪವರ್ ಕಂಪನಿ ಲಿ., ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿ ರಾಜ್ಯದ 5 ಹೆಸ್ಕಾಂಗಳ 19 ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣೆಗೆ ಪರವಾನಗಿ ಕೇಳಿದೆ. ಜಿಲ್ಲೆಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಕಷಿ ಪಂಪಸೆಟ್, ಭಾಗ್ಯಜ್ಯೋತಿ, ಕಟೀರ ಜ್ಯೋತಿ ಯೋಜನೆ ಲಾನುಭವಿಗಳು ಉಚಿತ ವಿದ್ಯುತ್ ಬಳಸಿ ಹೇಗೋ ಬದುಕಿದ್ದಾರೆ. ಖಾಸಗಿ ಕಂಪನಿಗಳ ದೌರ್ಜನ್ಯ ಮತ್ತು ದರ್ಪಕ್ಕೆ ರೈತರು, ಬಡವರೇ ಬಲಿಯಾಗಬೇಕಾಗುತ್ತದೆ ಎಂದರು.
ಒಂದು ವೇಳೆ ರೈತರ ವಿಚಾರದಲ್ಲಿ ವಿದ್ಯುತ್ ಖಾಸಗೀಕರಣವಾದರೆ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ತಾಲೂಕು ಘಟಕದ ಅಧ್ಯಕ್ಷ ವಿಜಯ ಶ್ರೇಷ್ಠಿ, ಉಪಾಧ್ಯಕ್ಷ ನಿಜಗುಣಿ ನಾವಿ, ಕಾರ್ಯದರ್ಶಿ ಮಾಯಗೌಡ ಪಾಟೀಲ, ರಾಯಗೌಡ ಪಾಟೀಲ, ದೀಲಿಪ ಮಾನೆ, ಅಪ್ಪಾಸಾಹೇಬ ಮಾನೆ, ಸಾವಂತ ಕೊಚೇರಿ, ಮಹಾದೇವ ಪಾಟೀಲ, ಶ್ರೀಶೈಲ ಕರಿಗಾರ, ಬಸವರಾಜ ಹಿರೇಮಠ, ಸುಲ್ತಾನ ಪೂಜೇರಿ, ಶ್ರೀಶೈಲ ಸಾಬನೆ, ಬಮ್ಮಗೌಡ ಪಾಟೀಲ, ದಸ್ತಗೀರ್ ಮುಲ್ತಾನಿ ಇತರರಿದ್ದರು.