ಬೋರಗಾಂವ ಪಟ್ಟಣದ ಅರಿಹಂತ ಸಹಕಾರ ಜವಳಿ ಗಿರಣಿಗೆ ಜವಳಿ ಮತ್ತು ಸಕ್ಕರೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಭೇಟಿ ನೀಡಿದರು. ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಸಿ.ಎಸ್.ಯೋಗೀಶ ಇತರರಿದ್ದರು. 
ಬೆಳಗಾವಿ

ಜವಳಿ ಉದ್ಯಮ ಪ್ರಗತಿಗೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ರೋಹಿಣಿ ಸಿಂಧೂರಿ ಭರವಸೆ
  • ಗಿರಣಿಗೆ ಭೇಟಿ, ಮಾಹಿತಿ ಸಂಗ್ರಹ
ಬೋರಗಾಂವ: ಕರ್ನಾಟಕ ಜವಳಿ ಉದ್ಯಮ ಪ್ರಗತಿಗೆ ವಿವಿಧ ಯೋಜನೆ ಕೈಗೊಂಡಿದ್ದೇವೆ. ಈ ಕುರಿತು ಶೀಘ್ರದಲ್ಲೇ ಜವಳಿ ಸಚಿವರಿಗೆ ಪ್ರಸ್ತಾವ ಸಲ್ಲಿಸುತ್ತೇವೆ ಎಂದು ಜವಳಿ ಮತ್ತು ಸಕ್ಕರೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಭರವಸೆ ನೀಡಿದರು.
ಪಟ್ಟಣದ ಅರಿಹಂತ ಸಹಕಾರ ಜವಳಿ ಗಿರಣಿಗೆ ಶುಕ್ರವಾರ ಭೇಟಿ ನೀಡಿ ಜವಳಿ ಉದ್ಯಮ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದರು.
ಅರಿಹಂತ ಜವಳಿ ಗಿರಣಿ ಅಧ್ಯಕ್ಷ ಉತ್ತಮ ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ಜವಳಿ ಉದ್ಯಮ ಪುನರುಜ್ಜೀವನಗೊಳಿಸಲು ಸಹಕಾರ ತತ್ತ್ವದ ಮೇಲೆ ಅರಿಹಂತ ಸಹಕಾರ ನೂಲುವ ಮಗ್ಗ ಸ್ಥಾಪಿಸಿದ್ದೇವೆ. ಹೆಚ್ಚುತ್ತಿರುವ ವಿದ್ಯುತ್ ಬಿಲ್, ಜಾಗತಿಕ ಮಾರುಕಟ್ಟೆಯಲ್ಲಿ ನೂಲಿಗೆ ನ್ಯಾಯಯುತ ಬೆಲೆ ಸಿಗದಿರುವುದು ಸೇರಿ ಹಲವಾರು ಸಮಸ್ಯೆಗಳನ್ನು ನೂಲುವ ಮಗ್ಗ ಎದುರಿಸುತ್ತಿದೆ. ಆದ್ದರಿಂದ ಮಹಾರಾಷ್ಟçದಂತೆ ರಿಯಾಯಿತಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಉದ್ಯಮಿ ಅಭಿನಂದನ ಪಾಟೀಲ ಮಾತನಾಡಿ, ಅರಿಹಂತ ಜವಳಿ ಗಿರಣಿ ರಾಜ್ಯದಲ್ಲಿ ಸಹಕಾರ ತತ್ತ್ವದ ಮೇಲೆ ನಡೆಯುತ್ತಿರುವ ಏಕೈಕ ಮಗ್ಗವಾಗಿದೆ. ಸೌಲಭ್ಯ ಕೊರತೆಯಿಂದ ಉದ್ಯಮಿಗಳು ವ್ಯವಸಾಯ ನಡೆಸಲು ಹಿಂದೆ ಸರಿದಿದ್ದಾರೆ. ಜವಳಿ ಉದ್ಯಮ ಬೆಳೆದರೆ ಉದ್ಯೋಗಾವಕಾಶ ಹೆಚ್ಚಲಿದೆ. ಹಾಗಾಗಿ, ಸರ್ಕಾರ ಜವಳಿ ಉದ್ಯಮದಲ್ಲಿರುವ ಸಮಸ್ಯೆ ಸರಿಪಡಿಸಬೇಕು ಎಂದರು.
ಜವಳಿ ಇಲಾಖೆ ಹಿರಿಯ ನಿರ್ದೇಶಕ ಸಿ.ಎಸ್.ಯೋಗೀಶ, ಜಂಟಿ ನಿರ್ದೇಶಕ ಡಾ.ಶಿವರಾಜ ಕುಲಕರ್ಣಿ, ಉಪ ನಿರ್ದೇಶಕ ಜಯಚಂದ್ರ ಪಾಟೀಲ, ಸಿದ್ದು ಕುಂಬಾರ, ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಯುವರಾಜ ಜ್ಯೋತಿ, ಸಿಇಒ ರಾಜೇಶ ಕಾರ್ವೇಕರ, ತಾಂತ್ರಿಕ ವ್ಯವಸ್ಥಾಪಕ ಸಂದೀಪ ಕುಲಕರ್ಣಿ, ಅರಿಹಂತ ಸಂಸ್ಥೆ ಸಿಇಒ ಅಶೋಕ ಬಂಕಾಪುರೆ, ಕೃಷಿ ಸಂಘದ ಸಿಇಒ ಆರ್.ಟಿ.ಚೌಗುಲಾ, ರೋಹಿತ ಪಾಟೀಲ ಇತರರಿದ್ದರು.