ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಧರ್ಮರಾಜ ಗೌಡರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಉಸ್ಮಾನ್ ಹಾದಿಮನಿ, ಮಲ್ಲಿಕಾರ್ಜುನ ಹುಂಬಿ, ನಿಂಗಪ್ಪ ತುರಾಯಿ, ವಿಠ್ಠಲ ಪಿಸೆ, ಪ್ರಕಾಶ ಬಳಿಗಾರ, ಈರಣ್ಣ ತುರಾಯಿ ಇತರರಿದ್ದರು. 
ಬೆಳಗಾವಿ

ರಾಜ್ಯ ಮಟ್ಟದ ಟಗರಿನ ಕಾಳಗ ನಾಳೆ

ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರರಾಣಿ ಮಲ್ಲಮ್ಮ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮುಖಂಡ ಉಸ್ಮಾನ್ ಹಾದಿಮನಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ವೀರರಾಣಿ ಮಲ್ಲಮ್ಮ ಅರ್ಬನ್ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ರೊಟ್ಟಯ್ಯನವರ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಮಲ್ಲಿಕಾರ್ಜುನ ಹುಂಬಿ, ನಿಂಗಪ್ಪ ತುರಾಯಿ, ವಿಠ್ಠಲ ಪಿಸೆ, ಪ್ರಕಾಶ ಬಳಿಗಾರ, ಈರಣ್ಣ ತುರಾಯಿ, ಮಡ್ಯಪ್ಪ ಪರಮನಾಯ್ಕರ, ಆಸೀಫ್ ಅತಾಮಾಲಿಕ, ಪಿಂಟು ಗುಡ್ಡದಮಠ, ಸಿದ್ದಪ್ಪ ಸಿದ್ದಣ್ಣವರ, ಬಿ.ಜಿ.ದೇಗಾವಿ, ಪ್ರಕಾಶ ಹುಂಬಿ, ಹನುಮಂತ ಕಕ್ಕಯ್ಯನವರ, ಡಿ.ವೈ.ಗರಗದ, ಮೈಲಾರ ತುರಾಯಿ, ರಿಯಾಜ್ ಹುಜರತ್ತಿ ಇತರರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶಂಕರ ಕರಿಕಟ್ಟಿ ನಿರೂಪಿಸಿದರು.