ಆಫ್ ದಿ ಚಾಪ್ಟರ್ ಅವಾರ್ಡ್ 2025’ ಪ್ರದಾನ
ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಮೂಡಬಿದರೆಯ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಈಚೆಗೆ ಆಯೋಜಿಸಿದ್ದ 21ನೇ ಕರ್ನಾಟಕ ರಾಜ್ಯಮಟ್ಟದ ಐಎಸ್‌ಟಿಇ ವಿದ್ಯಾರ್ಥಿ ಅಧಿವೇಶನದಲ್ಲಿ ‘ಬೆಸ್ಟ್ ಸ್ಟೂಡೆಂಟ್ ಆಫ್ ದಿ ಚಾಪ್ಟರ್ ಅವಾರ್ಡ್ 2025’ ಪ್ರದಾನ ಮಾಡಲಾಗಿದೆ.
ನೆಕ್ಷ್ಟ-ಜೆನ್ ಇಂಜಿನಿಯರಿಂಗ್: ಭಾರತದ ಡೀಪ್‌ಟೆಕ್ ನವೋದ್ಯಮ ಕುರಿತಾಗಿ ಜರುಗಿದ ಅಧಿವೇಶದಲ್ಲಿ ಜಿಐಟಿ ವಿದ್ಯಾರ್ಥಿಗಳಾದ ಯಶ್ ಮಹಾಂತೇಶ ಆಮಾಸಿ, ಸೃಷ್ಟಿ ಶಿವಾನಂದ ಕಡಲಗಿ, ನಿಖಿಲ್ ಯಂಕನಗೌಡ ರುದ್ರಗೌಡ್ರ ಮತ್ತು ವೈಷ್ಣವಿ ವನಗೇರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆಎಲ್‌ಎಸ್ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಪ್ರಾಂಶುಪಾಲ ಡಾ.ಎಂ.ಎಸ್.ಪಾಟೀಲ, ಡೀನ್ ಪ್ರೊ.ಸತೀಶ ದೇಶಪಾಂಡೆ, ಕಾರ್ಯದರ್ಶಿ ಮತ್ತು ಖಜಾಂಚಿ ಡಾ.ಅನುಪಮಾ ಕಲ್ಲೋಳ, ಅಧ್ಯಾಪಕ ವರ್ಗದ ಸಂಯೋಜಕರಾದ ಡಾ.ಶಾರದಾ ಕೋರಿ, ಪ್ರೊ.ರೂಪಾ ನಾವಳ್ಳಿ, ಇತರ ಅಧ್ಯಾಪಕ ವರ್ಗ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.