ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಕಲಾವಿದರ ಕ್ರಿಕೆಟ್ ಪಂದ್ಯಾವಳಿಯನ್ನು ಬಸವರಾಜ ದೇವರು ಉದ್ಘಾಟಿಸಿದರು. ಉದಗಟ್ಟಿ ರಂಗಮ್ಮದೇವಿ, ಬಸವರಾಜ ಕಪರಟ್ಟಿ ಇತರರಿದ್ದರು.
ಗೋಕಾಕ:
ನಗರದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಐದನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ,
ಮಾನಸಿಕ ಹಾಗೂ ದೈಹಿಕ ಸದಢತೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ಬಸವರಾಜ ದೇವರು, ಹಾಸ್ಯ ಕಲಾವಿದ ಲಂಗ ರಾಜಾ, ಪ್ರವೀಣಕುಮಾರ ಗಸ್ತಿ, ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ, ಅಶ್ವಿನಿ ದೇಮಶೆಟ್ಟಿ, ಸ್ಟೆಫಿ ಲೂಯಿಸ್, ಉದಗಟ್ಟೆಯ ರಂಗಮ್ಮದೇವಿ ಇತರರಿದ್ದರು.