ಐನಾಪುರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಗಣ್ಯರು ಚಾಲನೆ ನೀಡಿದರು. ಸಂಜು ಕುಚನೂರೆ, ಗುಂಡು ಖವಟಕೊಪ್ಪ, ಸತೀಶ ಅಪರಾಜ, ಡಾ.ವಿಕಾಸ ಕಾರ್ಚಿ ಇತರರಿದ್ದರು. 
ಬೆಳಗಾವಿ

ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

ಐನಾಪುರ:

ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಅಗತ್ಯ ಎಂದು ಪದ್ಮಾವತಿ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಸಂಜಯ ಕುಜನೂರೆ ಹೇಳಿದರು.

ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಸಂಸ್ಥೆಯ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಬೇಕು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಯುವಜನರಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ನಾಯಕತ್ವದ ಗುಣ ಬೆಳೆಸುತ್ತದೆ. ಕಲೆ ಪ್ರದರ್ಶಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ಕ್ರೀಡಾ ಸಂಯೋಜಕ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಸತೀಶ ಸನದಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ನಿರ್ಣಾಯಕರ ನಿರ್ಣಯ ತಪ್ಪದೇ ಪಾಲಿಸಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ರಮೇಶ ಪತಂಗಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಕಬಡ್ಡಿ ಅಮೇಚೂರ್ ಅಸೋಸಿ ಯೇಷನ್ ಉಪಾಧ್ಯಕ್ಷ ಗುಂಡು ಖವಟಕೊಪ್ಪ, ಸದಸ್ಯ ಸತೀಶ ಅಪರಾಜ, ಪ್ರಾಥಮಿಕ ಆರೋಗ್ಯ ಅಧಿಕಾರಿ ವಿಕಾಶ ಕಾರ್ಚಿ, ಬಿ.ಎ.ಪಾಟೀಲ, ರವಿ ಬಣಜವಾಡ, ಪ್ರಮೋದ ಲಿಂಬಿಕಾಯಿ, ಗಜಕುಮಾರ ಪಾಟೀಲ, ಶೀತಲ ಪಾಟೀಲ, ಭರತೇಶ ತೇರದಾಳೆ, ಸಂತೋಷ ತೇರದಾಳೆ, ವಸಂತ ಹುದ್ದಾರ, ಮುನ್ನಾ ಪಾಟೀಲ, ಶ್ರೀಕಾಂತ ಪಾಟೀಲ ಇತರರಿದ್ದರು. ಪ್ರಾಚಾರ್ಯ ಕೆ.ಜೆ.ಮಾಲಗಾಂವೆ ಸ್ವಾಗತಿಸಿದರು. ರವಿ ಬಡಿಗೇರ ವಂದಿಸಿದರು.