ಇಂಚಗೇರಿ ಮಠದಲ್ಲಿ ಹಮ್ಮಿಕೊಂಡಿದ್ದ ಮಾಧವಾನಂದ ಪ್ರಭೂಜಿ 46ನೇ ಪುಣ್ಯಸ್ಮರಣೋತ್ಸವದಲ್ಲಿ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿದರು. ಯಶವಂತರಾಯಗೌಡ ಪಾಟೀಲ, ಶಿವಾನಂದ ಸ್ವಾಮೀಜಿ ಇತರರಿದ್ದರು.
ಅರಟಾಳ: ಅಧ್ಯಾತ್ಮದಿಂದ ವಿಶ್ವಶಾಂತಿ ನೆಲೆಸಲು ಸಾಧ್ಯ. ಆದ್ದರಿಂದ ಅಧ್ಯಾತ್ಮದತ್ತ ಸಾಗುವವರ ಜೀವನ ಪಾವನವಾಗುತ್ತದೆ ಎಂದು ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು. ಸಮೀಪದ ಇಂಚಗೇರಿ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಧವಾನಂದ ಪ್ರಭೂಜಿ 46ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿ, ಭಾರತದ ಸಂಸ್ಕೃತಿ ಅರಿಯಲು ವಿದೇಶಿಗರು ಆಸಕ್ತರಾಗಿದ್ದಾರೆ. ಆದರೆ, ದೇಶವಾಸಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ ಎಂದರು. ಶಾಸಕರಾದ ಯಶವಂತರಾಯಗೌಡ ಪಾಟೀಲ, ದುರ್ಯೋಧನ ಐಹೊಳೆ ಹಾಗೂ ಶಶಿಕಾಂತ ನಾಯಿಕ, ಶಿವಾನಂದ ಮಠದ, ಶಿವಾನಂದ ಸ್ವಾಮೀಜಿ, ಸುಶೀಲಕುಮಾರ ಬೆಳಗಲಿ, ಅಭಿನವ ಮಂಜುನಾಥ, ಮಹಾದೇವ ಮಹಾರಾಜರು, ಬಾಬುರಾವ ಮಹಾರಾಜರು, ಗುರುಪಾದೇಶ್ವರ ಸ್ವಾಮೀಜಿ, ತುಕಾರಾಮ ಮಹಾರಾಜರು, ತಾರಾಚಂದ ಮಹಾರಾಜರು, ಮುಕುಂದ ಬೆಳಗಲಿ, ಶಂಕರೆಪ್ಪ ಮಹಾರಾಜರು, ಸುಂದಮ್ಮ ತಾಯಿ ಇತರರಿದ್ದರು.