ಕುಲಗೋಡ ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ಭೀಮಶಿ ಪೂಜೇರಿ, ಸತ್ಯಧ್ಯಾನ ಆಚಾರ್ಯ ಇತರರಿದ್ದರು.
ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಭಾಗದ ಭಕ್ತರಿಗೆ ಕುಲಗೋಡ ಬಲಭೀಮ ದೇವಸ್ಥಾನ ದೊಡ್ಡ ಶಕ್ತಿಯಾಗಿದೆ. ಎಲ್ಲರ ಸಹಕಾರದಿಂದ ಅದ್ದೂರಿಯಾಗಿ ಆಚರಿಸುತ್ತಿರುವ ಲಕ್ಷ ದೀಪೋತ್ಸವ ಮಾದರಿಯಾಗಿದೆ ಎಂದರು.
ಅರಬಾವಿ ಆಂಜನೇಯ, ಕಲ್ಲೊಳ್ಳಿ ಮಾರುತಿ ಮತ್ತು ಕುಲಗೋಡದ ಬಲಭೀಮ ದೇವಸ್ಥಾನ ಇತಿಹಾಸ ಹೊಂದಿವೆ. ಸ್ಥಳೀಯ ಮತ್ತು ನೆರೆಯ ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಬಲಭೀಮನು ಎಲ್ಲರಿಗೂ ಸುಖ, ಶಾಂತಿ ಹಾಗೂ ಆರೋಗ್ಯ ನೀಡಲೆಂದು ಪ್ರಾರ್ಥಿಸಿದರು.
ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಭೀಮಶಿ ಪೂಜೇರಿ, ಸತ್ಯಧ್ಯಾನ ಆಚಾರ್ಯ, ನರಹರಿ ಆಚಾರ್ಯ, ರಾಜೇಂದ್ರ ಜೋಶಿ, ಉದ್ಯಮಿ ಜೆ.ಎನ್.ಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಭೂ-ನ್ಯಾಯ ಮಂಡಳಿ ಮಾಜಿ ಸದಸ್ಯ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಬಾಗಲಕೋಟ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ಯಡಹಳ್ಳಿ, ತಮ್ಮಣ್ಣ ದೇವರ, ದತ್ತು ಕುಲಕರ್ಣಿ ಇತರರಿದ್ದರು.