ಚಿಕ್ಕೋಡಿಲಿ ಸ್ವಾಪ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
- ಚಿಕ್ಕೋಡಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಪ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮ ಆಯೋಜನೆ
- ಸಿ.ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜನೆ
- ಕೌಶಲ ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿದ ಪ್ರಾಚಾರ್ಯ ಖೋತ
ಸ್ವಾಪ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ವಿದ್ಯಾರ್ಥಿಗಳು ಪಠ್ಯದ ಜತೆಗೆ ಉತ್ತಮ ಕೌಶಲ, ಸಂವಹನ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಪುಣೆ ಜಿಟಿಟಿ ಫೌಂಡೇಶನ್ ನ ತರಬೇತಿ ಮತ್ತು ಉದ್ಯೋಗ ನಿಯೋಜನಾ ಸಂಯೋಜಕರಾದ ಶ್ರೀನಿವಾಸ ಕುಲಕರ್ಣಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಸೊಸೈಟಿಯ ಸಿ. ಬಿ. ಕೊರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಪುಣೆ ಜಿಟಿಟಿ ಫೌಂಡೇಶನ್, ಕಾಲೇಜಿನ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕ, ಐಕ್ಯೂಎಸಿ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ
ಆಯೋಜಿಸಲಾದ ನಾಲ್ಕು ದಿನಗಳ “ಸಾಫ್ಟ್ ಸ್ಕಿಲ್ಸ್ ತರಬೇತಿ ಕಾರ್ಯಕ್ರಮಕ್ಕೆ” ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ,ವ್ಯಕ್ತಿತ್ವ ವಿಕಸನ, ಆಂಗ್ಲ ಭಾಷಾ ಜ್ಞಾನ, ತಾರ್ಕಿಕ ಸಾಮರ್ಥ್ಯ, ಸಂದರ್ಶನ ಕೌಶಲ ಹಾಗೂ ಉದ್ಯೋಗಕ್ಕೆ ಅಗತ್ಯವಾದ ವೃತ್ತಿಪರ ಕೌಶಲಗಳನ್ನು ಬೆಳೆಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಎ. ಖೋತ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಕ್ಷೇತ್ರಕ್ಕೆ ತಾಂತ್ರಿಕ ಜ್ಞಾನದ ಜತೆಗೆ ಉತ್ತಮ ಸಂವಹನ ಕೌಶಲ ಹಾಗೂ ವೃತ್ತಿಪರ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳು ಈ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ. ಬಿ. ಕೆ. ಪಾಟೀಲ, ತರಬೇತಿ ಮತ್ತು ಉದ್ಯೋಗ ನಿಯೋಜನಾ ಸಂಯೋಜಕ ಪ್ರೊ. ಆರ್. ಆರ್. ಜಿರಳಿ, ಎನ್‌ಎಸ್‌ಎಸ್ ಸಂಯೋಜಕ ಪ್ರೊ. ಎಚ್. ಬಿ. ಗೊಂಧಳಿ ಇತರರಿದ್ದರು.