ಬೆಳಗಾವಿಯ ಮಹಾಂತ ಭವನದಲ್ಲಿ ಶುಕ್ರವಾರ ಜರುಗಿದ ರಂಗಭೂಮಿ ದಿನಾಚರಣೆಯಲ್ಲಿ ರಂಗಸಾಧಕರಾದ ಜಿ.ಕೆ.ಕಾಡೇಶಕುಮಾರ, ಶಂಕರ ಅರಕೇರಿ, ಅನಿಲ ಮೇತ್ರಿ, ಸುಜಾತಾ ಮಗದುಮ್ಮರನ್ನು ಸಲ್ಲಿಸಲಾಯಿತು. 
ಬೆಳಗಾವಿ

ಕಲಾವಿದರಿಗೆ ಸಮಾಜ ಉತ್ತೇಜನ ನೀಡಬೇಕಿದೆ

ಬೆಳಗಾವಿ: ರಂಗಕಲೆ ನೈಜ ಜೀವಂತ ಕಲೆಯಾಗಿದ್ದು, ಬಹಳ ಹಿಂದಿನಿಂದಲೂ ಬಂದಿರುವ ರಂಗನಾಟಕ ಪರಂಪರೆಯನ್ನು ಮುಂದಿನ ಜನಮಾನಸಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಲಾವಿದರಿಗೆ ಸಮಾಜವು ಹೆಚ್ಚಿನ ಉತ್ತೇಜನ ನೀಡಿ ಬೆಳೆಸಬೇಕಿದೆ ಎಂದು ರಂಗಕರ್ಮಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿವೃತ್ತ ಉಪ ಆಯುಕ್ತ ರವಿ ಕೊಟಾರಗಸ್ತಿ ರಂಗಾಸಕ್ತರಿಗೆ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ, ಧುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘ, ಮಹಾಂತೇಶ ನಗರ ರಹವಾಸಿ ಸಂಘದ ಶಿಕ್ಷಣ ಮಹಾವಿದ್ಯಾಲಯದಿಂದ ನಗರದ ಮಹಾಂತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಾಹಿತಿ ಡಾ.ಎಚ್.ಬಿ.ಕೋಲ್ಕಾರ ಮಾತನಾಡಿ, ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ, ನಾಟಕ ನೀಡಿದ ಕೊಡುಗೆ ಬೆಳಗಾವಿ ಜಿಲ್ಲೆಗಿದೆ. ರಾಷ್ಟ್ರೀಯ ಯುದ್ಧ ನಿಲ್ಲಿಸುವಲ್ಲಿ ಸಮಾನ ಭಾತೃತ್ವವನ್ನು ಬೆಳೆಸಲು ರಂಗಭೂಮಿಯ ಪಾತ್ರ ಅನನ್ಯವಾದದ್ದು, ಇಂದಿನ ಆಧುನಿಕತೆಯಲ್ಲಿ ಕುಟುಂಬ ಸಮೇತ ನೋಡುವ ಸೃಜನಶೀಲ ನಾಟಕಗಳು ಮೂಡಿಬರಬೇಕಿದೆ ಎಂದು ಆಶಯ ವ್ಯಕ್ತ ಪಡಿಸಿದರು.
ರಂಗಸಾಧಕರಾದ ಗೋಕಾಕದ ಜಿ.ಕೆ.ಕಾಡೇಶಕುಮಾರ, ಬೆಳಗಾವಿಯ ಶಂಕರ ಅರಕೇರಿ, ಅನಿಲ ಮೇತ್ರಿ, ಚಿಕ್ಕೋಡಿಯ ಸುಜಾತಾ ಮಗದುಮ್ಮರನ್ನು ಸಲ್ಲಿಸಲಾಯಿತು.
ನಾಟಕಕಾರ ಯ.ರು.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಗ್ರಾಮೀಣ ಬಿಇಒ ಕೆ.ಆರ್.ಆಂಜನೇಯ, ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ನಿರ್ಮಲಾ ಬಟ್ಟಲ, ಸಾಹಿತಿಗಳಾದ ಡಾ.ಎಚ್.ಐ.ತಿಮ್ಮಾಪೂರ, ಬಸವರಾಜ ಕುಪ್ಪಸಗೌಡರ ಇತರರಿದ್ದರು.
ನಾಟಕ ಅಕಾಡೆಮಿ ಸದಸ್ಯ ಬಾಬಾಸಾಹೇಬ ಕಾಂಬಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ತಳವಾರನಿರೂಪಿಸಿದರು. ಭರತ ಕಲಾಚಂದ್ರ ವಂದಿಸಿದರು. ಶಶಿಕಾಂತ ಜಂಗಿ ರಂಗಗೀತೆ ಪ್ರಸ್ತುತಪಡಿಸಿದರು. ಚಿಕ್ಕೋಡಿಯ ಆಶಾದೀಪ ಸಮುದಾಯ ಕಲಾಕೇಂದ್ರದವರು ಬೀದಿನಾಟಕ ಪ್ರಸ್ತುತಪಡಿಸಿದರು.