ಬನ್ನೂರ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಜ್ಯೋತಿ ಎಸ್.ಎನ್., ಶಿವಕುಮಾರ ಕೆ., ಸಿಕಂದರ್ ಮುಜಾವರ ಇತರರಿದ್ದರು. 
ಬೆಳಗಾವಿ

ಸಾಮಾಜಿಕ ಜ್ಞಾನ ಮುಖ್ಯ

ತೆಲಸಂಗ: ಎನ್‌ಎಸ್‌ಎಸ್ ವ್ಯಕ್ತಿತ್ವ ವಿಕಸನದ ಒಂದು ಪಾಠಶಾಲೆ. ಇಲ್ಲಿ ಸೇರುವುದು 7 ದಿನಗಳ ಶಿಬಿರಕ್ಕಲ್ಲ, ಬದಲಿಗೆ ಸಮಾಜದೊಂದಿಗೆ ನಾವು ಜೋಡಿಸಿಕೊಳ್ಳುವ ಪವಿತ್ರ ಕಾರ್ಯಕ್ಕಾಗಿ ಎಂದು ಎನ್‌ಎಸ್‌ಎಸ್ ಅಧಿಕಾರಿ ಜ್ಯೋತಿ ಎಸ್.ಎನ್. ಹೇಳಿದರು.
ಸಮೀಪದ ಬನ್ನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ತೆಲಸಂಗದ ಎಸ್‌ಎಂವೈಕೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗೆ ಪುಸ್ತಕ ಜ್ಞಾನದಷ್ಟೆ, ಸಾಮಾಜಿಕ ಜ್ಞಾನವೂ ಮುಖ್ಯ ಎಂದರು.
ಸಿಕಂದರ್ ಮುಜಾವರ, ಗುರುರಾಜ ಕಾಮನ, ಸಂಗು ದಾಶ್ಯಾಳ, ಪ್ರಾಂಶುಪಾಲ ಶಿವಕುಮಾರ ಕೆ., ರಮ್ಯಾ ಜೆ., ಡಾ.ಡಿ.ಬಿ.ಬಿರಾದರ, ಡಾ.ಸುಭಾಸ ಕಾಂಬಳೆ, ಡಾ.ಬಿ.ಐ.ಮಠಪತಿ, ಶ್ವೇತಾ ಜುಗಳೆ, ವಿಶ್ವನಾಥ ಪಾಟೀಲ, ಶಿವಲಿಂಗ ಮಾಗಣಗೇರಿ, ಚಂದ್ರಶೇಖರ, ದಾದಾ ಮಾನಗಾಂವಿ, ಸಚಿನ ಅವಟಿ ಇತರರಿದ್ದರು.