Six people were arrested 
ಬೆಳಗಾವಿ

ಆರು ಜನರ ಬಂಧನ

ವಿಠ್ಠಲ ಹಣಮಂತ ಬಾಳೇಕುಂದ್ರಿ
ಬೆಳಗಾವಿ: ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಗುರುವಾರ ಆರು ಜನರನ್ನು ಬಂಧಿಸಿ 6.95 ಗ್ರಾಪಂ ಹೆರಾಯಿನ್​ ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ತಾಲೂಕಿನ ಕಾಕತಿ ಗ್ರಾಮದ ಮೊಹಮ್ಮದ್​ ಮುಲ್ಲಾ (31), ಮಾರ್ಕೆಂಡೇಯ ಗ್ರಾಮದ ಸಂಜು ತಲ್ಲೂರಿ (28), ವಡಗಾಂವಿಯ ರಾಜು ಬಾಂಗೋಡಿ (51), ಆಜಂ ನಗರದ ಶಕುರ ಖಾನ್​ (27) ಹಾಗೂ ಗಾಂಜಾ ಸೇವಿಸುತ್ತಿದ್ದ ಉದ್ಯಮಬಾಗದ ನಿಖಿಲ ಮಾದಿಗರ (26), ರಾಣಿ ಚನ್ನಮ್ಮ ನಗರದ ರಾಹುಲ ಕೋಲಾಕರ (32) ಬಂಧಿತರು. ಈ ಕುರಿತು ಮಾರ್ಕೆಟ್​, ಉದ್ಯಮಭಾಗ ಹಾಗೂ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.