ಬೆಳಗಾವಿ: ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಗುರುವಾರ ಆರು ಜನರನ್ನು ಬಂಧಿಸಿ 6.95 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ತಾಲೂಕಿನ ಕಾಕತಿ ಗ್ರಾಮದ ಮೊಹಮ್ಮದ್ ಮುಲ್ಲಾ (31), ಮಾರ್ಕಂಡೇಯ ಗ್ರಾಮದ ಸಂಜು ತಲ್ಲೂರಿ (28), ವಡಗಾವಿಯ ರಾಜು ಬಾಂಗೋಡಿ (51), ಅಜಂ ನಗರದ ಶಕುರ್ ಖಾನ್ (27) ಹಾಗೂ ಗಾಂಜಾ ಸೇವಿಸುತ್ತಿದ್ದ ಉದ್ಯಮಬಾಗದ ನಿಖಿಲ ಮಾದಿಗರ (26), ರಾಣಿ ಚನ್ನಮ್ಮ ನಗರದ ರಾಹುಲ ಕೋಲಕಾರ (32) ಬಂಧಿತರು.
ಈ ಕುರಿತು ಮಾರ್ಕೆಟ್, ಉದ್ಯಮಬಾಗ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.