ನಿಪ್ಪಾಣಿಯ ಅಂಬೇಡ್ಕರ್ ನಗರಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ನಗರಸಭೆ ಆಯುಕ್ತ ಗಣಪತಿ ಪಾಟೀಲಗೆ ಮನವಿ ಸಲ್ಲಿಸಲಾಯಿತು. ಅಶೋಕಕುಮಾರ ಅಸೋದೆ, ವಿಶ್ವಾಸ ಮಾಳಿ, ಸಂಭಾಜಿ ಮುಗಳೆ, ಆತಿಷ ಶಿಂಧೆ ಇತರರಿದ್ದರು. 
ಬೆಳಗಾವಿ

ಸೌಲಭ್ಯ ಕಲ್ಪಿಸದಿದ್ದರೆ ಪಾಲಿಕೆಗೆ ಮುತ್ತಿಗೆ

ನಿಪ್ಪಾಣಿ:

ಕಳೆದ ಹಲವು ವರ್ಷಗಳಿಂದ ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಅಂಬೇಡ್ಕರ್ ನಗರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅಶೋಕಕುಮಾರ ಅಸೋದೆ ಎಚ್ಚರಿಸಿದರು.

ನಗರದ ಉಪನಗರ ಪ್ರದೇಶದಲ್ಲಿರುವ ಅಂಬೇಡ್ಕರ್ ನಗರದಲ್ಲಿನ ನೀರು ಹಾಗೂ ಮೂಲಸೌಲಭ್ಯಗಳ ಸಮಸ್ಯೆ ಕುರಿತು ದಲಿತ ಕ್ರಾಂತಿ ಸೇನೆಯ ನೇತೃತ್ವದಲ್ಲಿ ನಗರಸಭೆ ಆಯುಕ್ತರಿಗೆ ಈಚೆಗೆ ಮನವಿ ಸಲ್ಲಿಸಿ ಮಾತನಾಡಿ, ನಿರಂತರ ನೀರಿನ ಯೋಜನೆ ಪೈಪ್‌ಲೈನ್ ಜೋಡಣೆ ಮಾಡಿದ್ದರೂ, ನಾಗರಿಕರು ನೀರಿನ ಸಮಸ್ಯೆಯಿಂದ ತತ್ತರಿಸಿದ್ದಾರೆ. ಡಾ.ಅಂಬೇಡ್ಕರ್ ಭವನದ ವಾಚನಾಲಯ ದುಸ್ಥಿತಿಯಲ್ಲಿದೆ. ಸಮಸ್ಯೆ ಪರಿಹರಿಸಲು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಆಯುಕ್ತ ಗಣಪತಿ ಪಾಟೀಲ ಮನವಿ ಸ್ವೀಕರಿಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವಿಶ್ವಾಸ ಮಾಳಿ, ಸಂಭಾಜಿ ಮುಗಳೆ, ಆತಿಷ ಶಿಂಧೆ, ದಯಾನಂದ ಲೋಕೆ, ಜಯಸಿಂಗ್ ಕಾಂಬಳೆ, ಸುನೀಲ ಕಾಂಬಳೆ, ಶ್ರೀಕಾಂತ ಮಾಳಿ, ರಾಜು ಶೇಖ್, ಆನಂದ ಸಾವರದಕರ, ಬಸವ ಜಯಕರ, ಮಾನವ ಮಾಳಿ, ಪಪ್ಪು ಬಾಳಕೆ, ಅಶೋಕ ಹೆಗಡೆ, ನಾಗರಾಜ ಜಯಕರ, ರಾಜು ಮಾನೆ, ರಾಜು ಶಿಂಧೆ, ಪ್ರತೀಕ ಮುಗಾಳಿ, ಪ್ರಶಾಂತ ಸೂರ್ಯವಂಶಿ, ಏಕನಾಥ ಕಾಂಬಳೆ ಇತರರಿದ್ದರು.