ಉಗಾರ ಖುರ್ದ ಪಟ್ಟಣದ ಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಸಮಾರೋಪ ಸಮಾರಂಭದಲ್ಲಿ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಶರಣಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸನ್ಮಾರ್ಗ ತೋರಿದ ಸಿದ್ಧೇಶ್ವರ ಸ್ವಾಮೀಜಿ

ಪ್ರಮುಖ ಮುಖ್ಯಾಂಶಗಳು

  • ಡಾ.ಪ್ರಭಾಕರ ಕೋರೆ ಸ್ಮರಣೆ
  • ಸತ್ಸಂಗ ಸಮಾರೋಪ ಸಮಾರಂಭ
ಕಾಗವಾಡ: ಎಲ್ಲ ವಿಷಯದಲ್ಲೂ ಪಾಂಡಿತ್ಯ ಹೊಂದಿದ್ದ ಸಿದ್ಧೇಶ್ವರ ಸ್ವಾಮೀಜಿ ಪ್ರವಚನದ ಮೂಲಕ ಸರಿಯಾದ ಮಾರ್ಗ ತೋರಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ತಾಲೂಕಿನ ಉಗಾರ ಖುರ್ದ ಪಟ್ಟಣದ ಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸತ್ಸಂಗ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವೀರಶೈವ-ಲಿಂಗಾಯತ ಮಠಗಳು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಸಾರ ಸೇರಿ ದಾಸೋಹ ವಸತಿ ಕಲ್ಪಿಸಿ ತ್ಯಾಗ ಮಾಡಿದೆ ಎಂದರು.
ಚಿಕ್ಕಾಲಗುಂಡಿಯ ಶರಣಾನಂದ ಸ್ವಾಮೀಜಿ ಮಾತನಾಡಿ, ಆಸ್ತಿ, ಅಧಿಕಾರಕ್ಕಿಂತ ತಂದೆ-ತಾಯಿ ಆಶೀರ್ವಾದ ಬಹಳ ಮುಖ್ಯವಾಗಿದೆ. ಹಾಗಾಗಿ, ಪ್ರತಿಯೊಬ್ಬರು ಪಾಲಕರನ್ನು ಗೌರವದಿಂದ ಕಾಣಬೇಕು ಎಂದರು. ಬಸವಲಿಂಗ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿದ್ದಗೌಡ ಕಾಗೆ, ಮಂಜುನಾಥ ತೇರದಾಳೆ, ರಾಜೇಶ ದಾನೋಳೆ, ಉದಯ ಪಾಟೀಲ, ಎಸ್.ಡಿ.ದಾನನ್ನವರ ಇತರರಿದ್ದರು.