ಶಿವಶಕ್ತಿ ಶುಗರ್ಸ್ ಕಾರ್ಖಾನೆಗೆ ಹೆಚ್ಚು ಕಬ್ಬು ಪೂರೈಸಿದ ರೈತ ಲಕ್ಷ್ಮಣ ಬಾಣಗಾರಗೆ ಗಣ್ಯರು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು. ಮಲ್ಲಿಕಾರ್ಜುನ ಕೋರೆ, ಟಿ.ಡಿ.ಕಾಟೆ, ಭರತೇಶ ಬಣವನೆ ಇದ್ದರು. 
ಬೆಳಗಾವಿ

೧೮ ಲಕ್ಷ ಟನ್ ಕಬ್ಬು ನುರಿಸಿ ಶಿವಶಕ್ತಿ ಶುಗರ್ಸ್ ದಾಖಲೆ

ಪ್ರಮುಖ ಮುಖ್ಯಾಂಶಗಳು

  • ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹರ್ಷ
  • ಪ್ರಶಸ್ತಿ ವಿತರಣಾ ಸಮಾರಂಭ
ಮಾಂಜರಿ: ಯಡ್ರಾಂವ ಶಿವಶಕ್ತಿ ಶುಗರ್ಸ್ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ೧೮ ಲಕ್ಷ ಟನ್ ಕಬ್ಬು ನುರಿಸುವ ಮೂಲಕ ದಾಖಲೆ ಸೃಷ್ಟಿಸಿದೆ ಎಂದು ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ರಾಯಬಾಗ ತಾಲೂಕಿನ ಯಡ್ರಾಂವ್ ಶಿವಶಕ್ತಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಬ್ಬು ನುರಿಸುವ ಹಂಗಾಮು ಮುಕ್ತಾಯ, ಕಬ್ಬು ಸಾಗಣೆ ಗುತ್ತಿಗೆದಾರರಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಹಂಗಾಮು ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಖಾನೆಗೆ ಹೆಚ್ಚು ಕಬ್ಬು ಪೂರೈಸಿದ ಲಕ್ಷ್ಮಣ ಬಾಣಗಾರ ಹಾಗೂ ಗಣಪತಿ ಕುಂಬಾರ ಅವರಿಗೆ ತಲಾ ಒಂದೊಂದು ಫ್ರೀಜ್ ವಿತರಿಸಲಾಯಿತು. ವಲಯವಾರು ಕಬ್ಬು ಸಾಗಣೆದಾರರಿಗೆ, ವಾಹನ ಮಾಲೀಕರಿಗೆ, ಟಿ.ಕಾರ್ಡ್, ಟ್ರ‍್ಯಾಕ್ಟರ್‌ದಾರರಿಗೆ ಟಿವಿ, ಫ್ರೀಜ್, ವಾಶಿಂಗ್ ಮಷಿನ್, ಗ್ಯಾಸ್ ಸ್ಟೋವ್, ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಿದರು.
ಕಾರ್ಖಾನೆ ಉಪಾಧ್ಯಕ್ಷ ಟಿ.ಡಿ.ಕಾಟೆ, ನಿರ್ದೇಶಕರಾದ ಭರತೇಶ ಬಣವನೆ, ಅಜಿತ್ ದೇಸಾಯಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಅಣ್ಣಾಸಾಬ ಪಾಟೀಲ, ವಿ.ಜೆ.ರವಿ, ವಿಜಯ ಪಾಟೀಲ, ಮಹಾವೀರ ಕಾತ್ರಾಳೆ, ಬಿ.ಎ.ಪಾಟೀಲ, ಬಿ.ಎಸ್.ಮುಧೋಳೆ, ಸಂತೋಷ ಕರೆನ್ನವರ, ಎಸ್.ಪಿ.ನಿಪ್ಪಾಣಿ, ಎಸ್.ಎಸ್.ಯಾದವ, ಕೇಶವ ಪ್ರಸಾದ, ಪಾಂಡು ಬಡಗನ್ನವರ, ಗಜೇಂದ್ರ ಬೆಳ್ಳೆಸಿ, ಎನ್.ಎಸ್.ಮುಲ್ಲಾ ಇತರರಿದ್ದರು.